ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜೂನಿಯರ್‌, ಯೂತ್‌ ಅಥ್ಲೆಟಿಕ್ಸ್‌: ದ.ಕನ್ನಡ, ಬೆಂಗಳೂರಿಗೆ ಚಾಂಪಿಯನ್‌ ಪಟ್ಟ

ರಾಜ್ಯ ಜೂನಿಯರ್‌, ಯೂತ್‌ ಅಥ್ಲೆಟಿಕ್ಸ್‌: ಹರ್ಡಲ್ಸ್‌ನಲ್ಲಿ ದಶಕದ ದಾಖಲೆ ಮುರಿದ ಶ್ರೇಯಾ
Published 30 ಸೆಪ್ಟೆಂಬರ್ 2023, 23:50 IST
Last Updated 30 ಸೆಪ್ಟೆಂಬರ್ 2023, 23:50 IST
ಅಕ್ಷರ ಗಾತ್ರ

ಮಂಗಳೂರು: ಮುದ ನೀಡಿದ ಮಳೆಯ ತಂಪು ವಾತಾವರಣದಲ್ಲಿ 20 ಕೂಟ ದಾಖಲೆಗಳೊಂದಿಗೆ ಕಳೆಗಟ್ಟಿದ ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಮತ್ತು ಆತಿಥೇಯ ದಕ್ಷಿಣ ಕನ್ನಡ ಜಿಲ್ಲಾ ತಂಡದವರು ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು. ದಕ್ಷಿಣ ಕನ್ನಡದ ಪುರುಷರು ಒಟ್ಟು 317 ಪಾಯಿಂಟ್ ಗಳಿಸಿದರೆ ಬೆಂಗಳೂರು ಮಹಿಳೆಯರು 325 ಪಾಯಿಂಟ್ ಕಲೆ ಹಾಕಿದರು.  

ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಆಶ್ರಯದಲ್ಲಿ ಲೋಕನಾಥ್ ಬೋಳಾರ್ ಸ್ಮರಣೆಯಲ್ಲಿ ನಡೆದ ಕೂಟ ಶನಿವಾರ ಮುಕ್ತಾಯಗೊಂಡಿತು. 23 ಮತ್ತು 18 ವರ್ಷದೊಳಗಿನವರ ವಿಭಾಗಗಳಲ್ಲಿ ಕ್ರಮವಾಗಿ 102 ಮತ್ತು 228 ಪಾಯಿಂಟ್‌ಗಳೊಂದಿಗೆ ತಂಡ ಪ್ರಶಸ್ತಿಗಳನ್ನು ದಕ್ಷಿಣ ಕನ್ನಡ ಗೆದ್ದುಕೊಂಡಿತು. 20, 16 ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು ತಂಡಗಳು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಈ ವಿಭಾಗಗಳಲ್ಲಿ ತಂಡಗಳು ಕ್ರಮವಾಗಿ 165, 97 ಮತ್ತು 77 ಪಾಯಿಂಟ್ ಗಳಿಸಿದ್ದವು.  

ಕೊನೆಯ ದಿನ ಮಧ್ಯಾಹ್ನ ನಡೆದ 20 ವರ್ಷದೊಳಗಿನ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ ಅಮೋಘ ಓಟ ಮತ್ತು ಚುರುಕಿನ ಹರ್ಡಲಿಂಗ್ ಸಾಮರ್ಥ್ಯ ತೋರಿದ ಬೆಂಗಳೂರಿನ ಶ್ರೇಯಾ ರಾಜೇಶ್, ಪ್ರತಿಸ್ಪರ್ಧಿಯನ್ನು 5 ಸೆಕೆಂಡುಗಳಿಂದ ಹಿಂದಿಕ್ಕಿ ಚಿನ್ನ ಗೆದ್ದರು. ಇದರೊಂದಿಗೆ ಒಂದು ದಶಕದ ಹಿಂದಿನ ದಾಖಲೆ ಮುರಿದರು. ಒಟ್ಟು 10 ದಾಖಲೆಗಳು ಶನಿವಾರ ಮುರಿದುಬಿದ್ದವು. ಎರಡನೇ ದಿನ 20 ವರ್ಷದೊಳಗಿನ ಮಹಿಳೆಯರ 100 ಮೀಟರ್ಸ್ ಓಟದ ಚಿನ್ನ ಗೆದ್ದಿದ್ದ ಬೆಂಗಳೂರಿನ ನಿಯೋಲ್ ಅನಾ ಕೋರ್ನೆಲಿ ಶನಿವಾರ 200 ಮೀಟರ್ಸ್ ಓಟದಲ್ಲೂ ಮೊದಲಿಗರಾದರು.

ಕೊನೆಯ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಪುರುಷರು: 23 ವರ್ಷದೊಳಗಿನವರು: 200ಮೀ: ವಿನಾಯಕ್‌ ಎನ್‌.ಎಸ್‌ (ಧಾರವಾಡ) ಕಾಲ:21.79ಸೆ; 5000 ಮೀ: ವೈಭವ್‌ ಮಾರುತಿ ಪಾಟೀಲ (ಯಾದಗಿರಿ). ಕಾಲ: 15ನಿ 14.25 ಸೆ; 400 ಮೀ ಹರ್ಡಲ್ಸ್‌: ಆದಿತ್ಯ (ದಕ್ಷಿಣ ಕನ್ನಡ) ಕಾಲ: 56.35 ಸೆ; 3000 ಮೀ ಸ್ಟೀಪಲ್‌ ಚೇಸ್‌: ಸಂಜೀವ ಕುಮಾರ್ ಬ್ಯಾಟಪ್ಪ (ಹಾವೇರಿ) ಕಾಲ: 9ನಿ 52.41ಸೆ; ಹೈಜಂಪ್‌: ಅನಿಲ್ ಕುಮಾರ್ ಕಳಕಪ್ಪ (ದಕ್ಷಿಣ ಕನ್ನಡ) ಎತ್ತರ: 2 ಮೀ; ಹ್ಯಾಮರ್ ಥ್ರೋ: ಸಚಿನ್ (ಕೊಪ್ಪಳ) ದೂರ: 55.33 ಮೀ. 20 ವರ್ಷದೊಳಗಿನವರು: 200ಮೀ: ರಿತನ್ ಸಿ.ಎಚ್‌ (ಬೆಂಗಳೂರು) ಕಾಲ: 22.51ಸೆ; 5000 ಮೀ: ಶಿವಾಜಿ ಪಿ.ಎಂ (ಹಾವೇರಿ). ಕಾಲ: 14ನಿ 36.6 ಸೆ; 400 ಮೀ ಹರ್ಡಲ್ಸ್‌: ರಕ್ಷಿತ್ ರವೀಂದ್ರ ಎನ್‌ (ಬೆಂಗಳೂರು) ಕಾಲ: 54.19 ಸೆ; 3000 ಮೀ ಸ್ಟೀಪಲ್‌ ಚೇಸ್‌: ಭೀಮಾಶಂಕರ್‌ (ಬೆಂಗಳೂರು) ಕಾಲ: 9ನಿ 46.56ಸೆ; ಹ್ಯಾಮರ್ ಥ್ರೋ: ಧೀರಜ್ ಪೂಜಾರಿ (ಶಿವಮೊಗ್ಗ) ದೂರ:54.15 ಮೀ.

ಬಾಲಕರು: 18 ವರ್ಷದೊಳಗಿನವರು: 200ಮೀ: ಪ್ರತೀಕ್ ಡಿ (ಬೆಂಗಳೂರು) ಕಾಲ: 22.42ಸೆ; 400 ಮೀ ಹರ್ಡಲ್ಸ್‌: ಸಚಿನ್ ಬೀರಬಲ್‌ (ಬೆಳಗಾವಿ) ಕಾಲ: 54.84 ಸೆ; 2000 ಮೀ ಸ್ಟೀಪಲ್‌ ಚೇಸ್‌: ಮುತ್ತಣ್ಣ ಅಂತರಗಟ್ಟಿ (ಬೆಂಗಳೂರು) ಕಾಲ: 6ನಿ 46.02ಸೆ; ಹ್ಯಾಮರ್ ಥ್ರೋ: ಯಶಸ್‌ ಪ್ರವೀಣ್ (ಉತ್ತರ ಕನ್ನಡ) ದೂರ: 65.55ಮೀ; 16 ವರ್ಷದೊಳಗಿನವರು: 5000 ಮೀ ವೇಗ ನಡಿಗೆ: ಕಿಶನ್‌ ಆರ್‌ (ಮೈಸೂರು) ಕಾಲ: 27ನಿ 28 ಸೆ; ಹೈ ಜಂಪ್‌: ರೋಹಿತ್ ಕುಮಾರ್ (ಉಡುಪಿ) ಎತ್ತರ: 1.70ಮೀ; ಹ್ಯಾಮರ್ ಥ್ರೋ: ಹೇಮಂತ್ ಕುಮಾರ್ ಎಂ (ಬೆಂಗಳೂರು) ದೂರ: 53.93 ಮೀ; 14 ವರ್ಷದೊಳಗಿನವರು: 60 ಮೀ: ಕೆವಿನ್‌ ಜೀವನ್ ಸಿದ್ಧಿ (ಉತ್ತರ ಕನ್ನಡ) ಕಾಲ:7.60 ಸೆ; ಶಾಟ್‌ಪಟ್‌: ಆರ್ಯನ್ ಗಣೇಶ್‌ ಬೈಲೂರು (ಉಡುಪಿ) ದೂರ: 12.14ಮೀ.

ಮಹಿಳೆಯರು: 23 ವರ್ಷದೊಳಗಿನವರು: 200ಮೀ: ಕೀರ್ತನಾ ಎಸ್‌ (ಉಡುಪಿ) ಕಾಲ: 25.41ಸೆ; 5000 ಮೀ: ನಕೋಶಾ ಮಂಗಣಕರ್‌ (ಬೆಳಗಾವಿ) ಕಾಲ: 19ನಿ 56.44ಸೆ; 400 ಮೀ ಹರ್ಡಲ್ಸ್‌: ಪ್ರಜ್ಞಾ ಕೆ (ದಕ್ಷಿಣ ಕನ್ನಡ) ಕಾಲ: 1ನಿ 2.32 ಸೆ; ಲಾಂಗ್‌ಜಂಪ್‌: ತಾರುಣ್ಯಾ ಪ್ರಸಾದ್ (ಬೆಂಗಳೂರು) ಅಂತರ: 5.29ಮೀ; ಹೆಪ್ಟಾಥ್ಲಾನ್‌: ಶ್ವೇತಾ (ಉಡುಪಿ) ಪಾಯಿಂಟ್ಸ್: 3653. 20 ವರ್ಷದೊಳಗಿನವರು: 200ಮೀ:ನಿಯೊಲಿ ಅನಾ ಕೊರ್ನೆಲಿ (ಬೆಂಗಳೂರು) ಕಾಲ: 25.21ಸೆ; 400 ಮೀ ಹರ್ಡಲ್ಸ್‌: ಶ್ರೇಯಾ ರಾಜೇಶ್‌ (ಬೆಂಗಳೂರು). ಕಾಲ: 1ನಿ 0.2ಸೆ; 3000 ಮೀ ಸ್ಟೀಪಲ್‌ ಚೇಸ್‌: ಎಚ್‌.ಎಂ ಹರ್ಷಿತಾ (ಹಾಸನ) ಕಾಲ: 11ನಿ 32.67ಸೆ; ಹೆಪ್ಟಾಥ್ಲಾನ್‌: ಪಾವನ ನಾಗರಾಜ್ (ಶಿವಮೊಗ್ಗ) ಪಾಯಿಂಟ್ಸ್‌: 4463.

ಬಾಲಕಿಯರು: 18 ವರ್ಷದೊಳಗಿನವರು: 200ಮೀ: ವೈಭವಿ ಬಾಲು (ಬೆಳಗಾವಿ) ಕಾಲ:25.92ಸೆ; 5000 ಮೀ ವೇಗ ನಡಿಗೆ: ಅಂಬಿಕಾ ಕೋಳಿ (ದಕ್ಷಿಣ ಕನ್ನಡ) ಕಾಲ: 32ನಿ 11.72ಸೆ; 400 ಮೀ ಹರ್ಡಲ್ಸ್‌: ಅರ್ಣಿಕಾ ವರ್ಷಾ ಡಿಸೋಜ (ಉಡುಪಿ) ಕಾಲ: 1ನಿ 10.70 ಸೆ; 2000 ಮೀ ಸ್ಟೀಪಲ್‌ ಚೇಸ್‌: ಶ್ರೀರಕ್ಷಾ (ಹಾಸನ) ಕಾಲ:7ನಿ 58.24ಸೆ; ಹೆಪ್ಟಾಥ್ಲಾನ್‌: ಭುವನಾ ಸಾರಯ್ಯ (ವಿಜಯಪುರ) ಪಾಯಿಂಟ್ಸ್ 3323; 16 ವರ್ಷದೊಳಗಿನವರು: 3000 ಮೀ ವೇಗ ನಡಿಗೆ: ಚೈತನ್ಯಾ (ಉಡುಪಿ) ಕಾಲ: 18ನಿ 26.88ಸೆ; ಹೆಕ್ಸಾಥ್ಲಾನ್‌: ಅವನಿ ಗಣೇಶ್‌ (ಉಡುಪಿ) ಪಾಯಿಂಟ್ಸ್‌ 2689; 14 ವರ್ಷದೊಳಗಿನವರು: 60 ಮೀ: ಚೈತನ್ಯಾ ಆರ್‌.ಎಂ (ಬೆಂಗಳೂರು) ಕಾಲ:8.40ಸೆ; ಶಾಟ್‌ಪಟ್‌: ಸಂಜನಾ ರೆಡ್ಡಿ (ಮೈಸೂರು) ದೂರ: 13.3ಮೀ.

ಕೊನೆಯ ದಿನ 10 ಕೂಟ ದಾಖಲೆ

* 23 ವರ್ಷದೊಳಗಿನ ಪುರುಷರ ಹ್ಯಾಮರ್ ಥ್ರೋ: ಕೊಪ್ಪಳದ ಸಚಿನ್. 55.33 ಮೀ

(ಹಿಂದಿನ ದಾಖಲೆ: ರಾಹುಲ್ ಬಿ.ರಾಮ್‌, 52.55 ಮೀ; 2022)

* 23 ವರ್ಷದೊಳಗಿನ ಪುರುಷರ 5000 ಮೀ: ಯಾದಗಿರಿಯ ವೈಭವ್‌ ಎಂ.ಪಿ. 15ನಿ 14.25ಸೆ

(ಹಿಂದಿನ ದಾಖಲೆ: ಎ.ಆರ್‌.ರೋಹಿತ್‌: 15ನಿ 30.1 ಸೆಲ 2021

* 23 ವರ್ಷದೊಳಗಿನ ಪುರುಷರ ಹೈ ಜಂಪ್‌: ದಕ್ಷಿಣ ಕನ್ನಡದ ಅನಿಲ್ ಕುಮಾರ್‌. 2 ಮೀ

(ಹಿಂದಿನ ದಾಖಲೆ: ಸೃಜನ್ ಜೆ: 1.93 ಮೀ; 2022) 

* 20 ವರ್ಷದೊಳಗಿನ ಪುರುಷರ 5000 ಮೀ: ಹಾವೇರಿಯ ಶಿವಾಜಿ ಪಿ.ಎಂ. 14ನಿ 36.67ಸೆ

(ಹಿಂದಿನ ದಾಖಲೆ: ಶಿವಾಜಿ ಪಿ.ಎಂ: 14ನಿ 52.6ಸೆ; 2022)

* 20 ವರ್ಷದೊಳಗಿನ ಮಹಿಳೆಯರ 400 ಮೀ ಹರ್ಡಲ್ಸ್‌: ಬೆಂಗಳೂರಿನ ಶ್ರೇಯಾ ರಾಜೇಶ್‌. 1ನಿ 0.2 ಸೆ

(ಹಿಂದಿನ ದಾಖಲೆ: ಅರ್ಪಿತಾ ಎಂ: 1ನಿ 1.3 ಸೆ; 2012)

* 18 ವರ್ಷದೊಳಗಿನ ಬಾಲಕರ 400 ಮೀ ಹರ್ಡಲ್ಸ್‌: ಬೆಳಗಾವಿಯ ಸಚಿನ್‌ ಬೀರಬಲ್‌; 54.84 ಸೆ

(ಹಿಂದಿನ ದಾಖಲೆ: ಕೃಷ್ಣ ಜಿ: 55.2 ಸೆ;  2018)

* 18 ವರ್ಷದೊಳಗಿನ ಬಾಲಕರ ಹ್ಯಾಮರ್ ಥ್ರೋ: ಉತ್ತರ ಕನ್ನಡದ ಯಶಸ್‌ ಪಿ. 65.55ಮೀ

(ಹಿಂದಿನ ದಾಖಲೆ: ಗವಿ ಸ್ವಾಮಿ: 63.71 ಮೀ; 2013)

* 16 ವರ್ಷದೊಳಗಿನ ಬಾಲಕರ ಹೆಕ್ಸಾಥ್ಲಾನ್‌. ಹಾವೇರಿಯ ಹಿಮೇಶ್‌ ಎನ್‌: 3123 ಪಾಯಿಂಟ್ಸ್‌ 

(ಹಿಂದಿನ ದಾಖಲೆ: ಹಿಮೇಶ್ ಎನ್‌: 2740 ‍‍ಪಾಯಿಂಟ್ಸ್; 2022)

* 16 ವರ್ಷದೊಳಗಿನ ಬಾಲಕಿಯರ ಹೆಕ್ಸಾಥ್ಲಾನ್‌. ಉಡುಪಿಯ ಅವನಿ ಗಣೇಶ್‌: 2689 ಪಾಯಿಂಟ್ಸ್‌

(ಹಿಂದಿನ ದಾಖಲೆ: ಭುವನ್‌–2516 ಪಾಯಿಂಟ್ಸ್‌; 2022)

* 23 ವರ್ಷದೊಳಗಿನ ಪುರುಷರ 3000 ಮೀ ಸ್ಟೀಪಲ್ ಚೇಸ್‌. ಹಾವೇರಿಯ ಸಂಜೀವ್ ಕುಮಾರ್‌: 9ನಿ 52.41ಸೆ 

(ಹಿಂದಿನ ದಾಖಲೆ: ರಾಹುಲ್‌: 9ನಿ 55.6ಸೆ; 2022)

[object Object]

ಮಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಸಮಗ್ರ ಚಾಂಪಿಯನ್‌ ಆದ ಹಾಗೂ 20 16 ಮತ್ತು 14 ವರ್ಷದೊಳಗಿನವರ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಗಳಿಸಿದ ಬೆಂಗಳೂರು ಜಿಲ್ಲೆಯ ಅಥ್ಲೀಟ್‌ಗಳ ಸಂಭ್ರಮ

-ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

[object Object]

18 ವರ್ಷದೊಳಗಿನ ಬಾಲಕರ 200 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಬೆಂಗಳೂರಿನ ಪ್ರತೀಕ್ ಡಿ ಸಂಭ್ರಮ

–ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

[object Object]

20 ವರ್ಷದೊಳಗಿನ ಪುರುಷರ 3000 ಮೀಟರ್ಸ್‌ ಸ್ಟೀಪಲ್ ಚೇಸ್‌ನ ಚಿನ್ನ ತಮ್ಮದಾಗಿಸಿಕೊಂಡ ಬೆಂಗಳೂರಿನ ಭೀಮಾಶಂಕರ್ (ಮುಂದೆ ಇರುವವರು) ಗುರಿಯತ್ತ ಸಾಗಿದ ರೀತಿ

–ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT