ಶ್ರೀರಂಗಪಟ್ಟಣ: ಕರ್ವ್ಯದ ದಿನವಾದ ಮೇ 30ರಂದು ತಾಲ್ಲೂಕಿನ ಬ್ರಹ್ಮಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಎಸ್ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಚಂದ್ರಶೇಖರ್ ಸೋಮವಾರ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಬ್ರಹ್ಮಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಏಕೋಪಾಧ್ಯಾಯ ಶಾಲೆ)ಯ ಶಿಕ್ಷಕಿ ಸರೋಜಮ್ಮ.ಬಿ ಎಂಬವರು ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದು, ಪಕ್ಕದ ನಗುವನಹಳ್ಳಿ ಶಾಲೆಯ ಸಹ ಶಿಕ್ಷಕಿ ಅಂಜುಂ ಅಪ್ಜಾ ಎಂಬವರನ್ನು ಬ್ರಹ್ಮಪುರ ಶಾಲೆಗೆ ನಿಯೋಜಿಸುವಂತೆ ಸೂಚಿಸಲಾಗಿತ್ತು. ಮೂರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಕಾರ್ಯ ಹಂಚಿಕೆ ಮಾಡುವಂತೆ ಆದೇಶ ನೀಡಲಾಗಿತ್ತು. ಆದರೆ ನಗುವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಎಸ್ ಕಾಲಮಿತಿಯೊಳಗೆ ತಮ್ಮ ಶಾಲೆಯ ಸಹ ಶಿಕ್ಷಕಿಗೆ ಕಾರ್ಯ ಹಂಚಿಕೆ ಮಾಡದೆ ಕರ್ತವ್ಯ ಲೋಪ ಎಸಗಿದ್ದು, ಮೂರು ದಿನಗಳ ಒಳಗಾಗಿ ಉತ್ತರ ನೀಡುವಂತೆ ಬಿಇಒ ನೋಟಿಸ್ನಲ್ಲಿ ತಿಳಿಸಿದ್ದಾರೆ.

ಬ್ರಹ್ಮಪುರ ಶಾಲೆಗೆ ಸಂತೋಷ್ ನೇತೃತ್ವದ ‘ಸರ್ಕಾರಿ ಶಾಲೆ ನನ್ನವ್ವ ಆಂದೋಲನ’ದ ಪಾದಯಾತ್ರಿಗಳ ತಂಡ ಮೇ 30ರಂದು ಭೇಟಿ ನೀಡಿದ್ದು, ಕರ್ತವ್ಯದ ದಿನ ಶಾಲೆಗೆ ಬೀಗ ಹಾಕಿದ್ದ ಕಾರಣ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದ ಇಲಾಖೆಗೆ ತೀವ್ರ ಮುಜುಗರ ಉಂಟಾಗಿದೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ನೈಜ ವರದಿ ನೀಡಬೇಕು’ ಎಂದು ಸಿಆರ್ಪಿ ಶಿವಕುಮಾರ್ ಬಿ.ಎಂ ಅವರಿಗೂ ಬಿಇಒ ಚಂದ್ರಶೇಖರ್ ನೋಟಿಸ್ ನೀಡಿದ್ದಾರೆ.

ಬ್ರಹ್ಮಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರ್ತವ್ಯದ ದಿನ ಬಂದ್ ಆಗಿದ್ದ ಸಂಬಂಧ ‘ಮುಚ್ಚಿದ್ದ ಸರ್ಕಾರಿ ಶಾಲೆ: ಆಕ್ರೋಶ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಮೇ 31ರಂದು ವರದಿ ಪ್ರಕಟವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-40-38919444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.