ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ:ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್ ಸ್ಕಾಲರ್‌ಶಿಪ್

Last Updated 26 ಡಿಸೆಂಬರ್ 2021, 22:30 IST
ಅಕ್ಷರ ಗಾತ್ರ

ಐಐಟಿ ಗಾಂಧಿನಗರ ಫಿಸಿಕ್ಸ್ ಡಿಸಿಪ್ಲಿನ್‌ (ಪಿಡಿ) ಪೋಸ್ಟ್– ಡಾಕ್ಟರಲ್ ಫೆಲೋಶಿಪ್‌ (ಪಿಡಿಎ) 2021
ವಿವರ: ಐಐಟಿ ಗಾಂಧಿನಗರ ಫಿಸಿಕ್ಸ್ ಡಿಸಿಪ್ಲಿನ್‌ (ಪಿಡಿ) ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2021 ಪಿಎಚ್‌ಡಿ ಪದವೀಧರರಿಗೆ ನೀಡುತ್ತಿರುವ ಸಂಶೋಧಾನ ಅವಕಾಶವಾಗಿದೆ.

ಆರ್ಥಿಕ ನೆರವು: ಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪದವಿ ಮುಗಿಸಿದವರು ಹಾಗೂ ತಮ್ಮ ಪ್ರಬಂಧ ಸಲ್ಲಿಸಿರುವ ಅಥವಾ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಈ ಫೆಲೋಶಿಪ್ ಮುಕ್ತವಾಗಿದೆ.

ಆರ್ಥಿಕ ನೆರವು: ತಿಂಗಳಿಗೆ ₹ 50,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2021
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/praja/GPF8

ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ವಿವರ: ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ(ಎಸ್‌ಟಿಎಫ್‌ಸಿ) ಲಿಮಿಟೆಡ್ ವಾಣಿಜ್ಯ ಸಾರಿಗೆ ಚಾಲಕರ ಕುಟಂಬದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. 10 ಮತ್ತು 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಪಡೆಯಲು ಬಯಸುವ ಹಿಂದುಳಿದ ವರ್ಗಗಳ ಆಯ್ದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು.
ಅರ್ಹತೆ: ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌, ಪದವಿ ಹಾಗೂ ಎಂಜಿನಿಯರಿಂಗ್ ಕಾರ್ಯಕ್ರಮಗಳಿಗೆ ದಾಖಲಾದ 10 ಹಾಗೂ 12ನೇ ತರಗತಿಯಲ್ಲಿ ಕನಿಷ್ಠ ಶೇ 60 ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಸಾರಿಗೆ ಚಾಲಕನ ಕುಟುಂಬದವರಾಗಿರಬೇಕು ಮತ್ತು ಅವರ ಆದಾಯವು ವರ್ಷಕ್ಕೆ ₹4 ಲಕ್ಷ ಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ನೆರವು: ಆಯ್ದ ವಿದ್ಯಾರ್ಥಿಗಳು ಐಟಿಐ, ಪಾಲಿಟೆಕ್ನಿಕ್, ಡಿಪ್ಲೊಮಾ ಅಧ್ಯಯನಕ್ಕಾಗಿ ವರ್ಷಕ್ಕೆ ₹15,000 ರೂಗಳನ್ನು (ಗರಿಷ್ಠ 1 ವರ್ಷಗಳು) ಪಡೆಯುತ್ತಾರೆ. ಮತ್ತು ಪದವಿ, ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ವರ್ಷಕ್ಕೆ ₹ 35,000 (ಗರಿಷ್ಠ 4 ವರ್ಷಗಳವರೆಗೆ) ಪಡೆಯುತ್ತಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2021
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/praja/SIMD4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT