ಚನ್ನರಾಯಪಟ್ಟಣ: ‘ವಿದ್ಯಾರ್ಥಿಗಳು ನಿತ್ಯ ಒಂದು ಗಂಟೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನಸು ಪರಿಪಕ್ವವಾಗುತ್ತದೆ. ಶಿಕ್ಷಣದ ಜತೆ ಸಂಗೀತ, ಸಾಹಿತ್ಯ, ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಿದಂತಾಗುತ್ತದೆ’ ಎಂದು ಶಾಸಕ ಸಿಎ.ನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರಿಯ ಸೇವಾಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ಕ್ರಾಸ್ ಸಂಸ್ಥೆಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯೋಗಾಸನ, ಧ್ಯಾನ, ಪ್ರಾಣಾಯಾಮ, ಕ್ರೀಡೆ, ವಾಯು ವಿಹಾರದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಉತ್ತಮ ಪುಸ್ತಕಗಳು, ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪರಿಸರ ಸಂರಕ್ಷಿಸುವ ಕೆಲಸಮಾಡಬೇಕು. ನಾವು ಪರಿಸರ ಸಂಪತ್ತನ್ನು ರಕ್ಷಿಸಬೇಕು. ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ನುಗ್ಗೇಹಳ್ಳಿ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಟಿ.ಆರ್. ಸ್ವಾಮಿ ಮಾತನಾಡಿ, ‘ವಿದ್ಯೆಗೆ ವಿನಯವೇ ಭೂಷಣ. ವಿದ್ಯೆ ವಿವೇಕ ಉಂಟುಮಾಡುತ್ತದೆ. ನಡವಳಿಕೆ ಉತ್ತಮವಾಗುತ್ತದೆ. ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಇದರಿಂದ ಸರ್ವತೋಮುಖ ಪ್ರಗತಿ ಸದ್ಯ’ ಎಂದು ಹೇಳಿದರು.

ಕ್ರೀಡಾಪಟು ಎಚ್.ಎಂ. ಜೀವನ್, ಕನ್ನಡದಲ್ಲಿ 100 ಅಂಕಗಳಿಸಿದ ವಿದ್ಯಾರ್ಥಿಗಳಾದ ಹರ್ಷಿತಾ, ಹೇಮಂತ್, ಸುಪ್ರಿತ್ ಸೇರಿ ಸಾಧಕ ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಎಸ್.ಎಚ್. ಗಂಗೇಗೌಡ ಮಾತನಾಡಿದರು. ಸಹಪ್ರಾಧ್ಯಾಪಕರಾದ ಕೆ.ಟಿ.ಶಿವಕುಮಾರ್, ಜೆ.ಎಸ್. ಗುರುರಾಜ., ಬಿ.ಎಸ್. ಪೂರ್ಣಿಮಾ, ಕೆ.ಎನ್. ಅಜಯ್ಕುಮಾರ್, ಮುನಿರಾಜ್, ಸಚ್ಚಿದಾನಂದ್, ದಿವ್ಯಾ, ದೈಹಿಕ ಶಿಕ್ಷಣನಿರ್ದೇಶಕ ಸಿ. ಪ್ರಕಾಶ್ಕುಮಾರ್, ಟಿಎಪಿಸಿಎಂಎಸ್ ಅದ್ಯಕ್ಷ ಎಚ್.ಆರ್. ವೆಂಕಟೇಶ್, ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘದ ಅದ್ಯಕ್ಷ ಸಂಪತ್ಕುಮಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-1506979354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.