ಬೆಳಗಾವಿ: ಜಿಲ್ಲೆಯಲ್ಲಿ 2026–27ನೇ ಸಾಲಿನ ತರಗತಿ ಮೇ 29ರಂದು ಆರಂಭಗೊಳ್ಳಲಿವೆ. ಬೇಸಿಗೆ ರಜೆ ಕಳೆದು ಖುಷಿಯಿಂದ ಶಾಲೆ ಮೆಟ್ಟಿಲೇರುವ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಪಠ್ಯಪುಸ್ತಕ ವಿತರಣೆಗೆ ಶಾಲಾ ಶಿಕ್ಷಣ ಇಲಾಖೆ ತಯಾರಿ ಮಾಡಿಕೊಂಡಿದೆ.

ಶಾಲೆ ಆರಂಭಕ್ಕೆ ಇನ್ನೂ 14 ದಿನ ಬಾಕಿ ಇವೆ. ಆದರೆ, ಕರ್ನಾಟಕ ಪಠ್ಯಪುಸ್ತಕ ಸಂಘದವರು ಜಿಲ್ಲೆಯ ಬಿಇಒ ಕಚೇರಿಗಳ ಗೋದಾಮುಗಳಿಗೆ ಈಗಾಗಲೇ ಪಠ್ಯಪುಸ್ತಕ ಸರಬರಾಜು ಮಾಡುತ್ತಿದ್ದಾರೆ.

ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳ ಪಠ್ಯಪುಸ್ತಕ ಬಂದಿವೆ. ಇನ್ನೆರಡು ದಿನಗಳಲ್ಲಿ ಬಿಇಒ ಕಚೇರಿ ಗೋದಾಮುಗಳಿಂದ ಆಯಾ ಶಾಲೆಗಳಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಹಿಂದೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳಾದ ನಂತರ ಎಲ್ಲ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕ ಕೈಗೆಟುಕುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಲೆ ಆರಂಭೋತ್ಸವ ದಿನವೇ ಪಠ್ಯಪುಸ್ತಕ ನೀಡಿ, ಕಲಿಕೆಗೆ ಮಕ್ಕಳನ್ನು ಹುರಿದುಂಬಿಸಲಾಗುತ್ತಿದೆ.

91 ಲಕ್ಷ ಪುಸ್ತಕಕ್ಕೆ ಬೇಡಿಕೆ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 30,18,662 ಉಚಿತ, 9,97,889 ಮಾರಾಟ ಸೇರಿದಂತೆ 40,16,551 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಮೇ 13ರವರೆಗೆ 16,42,737 ಉಚಿತ, 6,41,708 ಮಾರಾಟ ಸೇರಿ 22,84,445 ಪುಸ್ತಕ ಪೂರೈಕೆಯಾಗಿವೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 38,68,634 ಉಚಿತ, 11,72,970 ಮಾರಾಟ, ಆರ್ಟಿಇ ಅಡಿ ಪ್ರವೇಶ ಪಡೆಯುವ ಮಕ್ಕಳಿಗಾಗಿ 42,489 ಪುಸ್ತಕ ಸೇರಿ 50,84,093 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ವಿವಿಧ ಮಾಧ್ಯಮಗಳ ಹಲವು ಶೀರ್ಷಿಕೆಗಳ ಶೇ 60ರಷ್ಟು ಪೂರೈಕೆಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಕೊಡುತ್ತೇವೆ. ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಇಂತಿಷ್ಟು ಶುಲ್ಕ ಭರಿಸಿಕೊಡು, ಮಾರಾಟ ರೂಪದಲ್ಲಿ ಪುಸ್ತಕ ನೀಡುತ್ತೇವೆ. ಹಂತ–ಹಂತವಾಗಿ ಎಲ್ಲ ಶೀರ್ಷಿಕೆಗಳ ಪುಸ್ತಕ ಬರಲಿವೆ. ಶಾಲೆ ಆರಂಭದ ಹೊತ್ತಿಗೆ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಪೂರ್ತಿಯಾಗಲಿದೆ’ ಎಂದು ತಿಳಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-21-175274159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.