ಕಾರವಾರ: ‘ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ತೆರೆದು, ಅಲ್ಲಿ ಕನ್ನಡ ಪುಸ್ತಕಗಳು ಇರುವಂತೆ ನೋಡಿಕೊಳ್ಳಬೇಕು ಎಂಬುದು ಕನ್ನಡ ಪುಸ್ತಕ ಪ್ರಾಧಿಕಾರದ ಗುರಿಯಾಗಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮನೆಗಳಲ್ಲಿ ಸ್ಥಾಪಿಸಿರುವ ಗ್ರಂಥಾಲಯಗಳು ಕೇವಲ ಪುಸ್ತಕದ ಕಟ್ಟುಗಳಲ್ಲ, ಅವುಗಳು ಆ ಮನೆಯ ನಿವಾಸಿಗಳ ಜ್ಞಾನ, ಸ್ವಾಭಿಮಾನ ಮತ್ತು ಅರಿವಿನ ಸಂಕೇತ. ಭಕ್ತಿಯ ಸಂಕೇತವಾಗಿ ಪೂಜಾ ಕೋಣೆ ಇರುವಂತೆ, ಜ್ಞಾನದ ಸಂಕೇತವಾಗಿ ಗ್ರಂಥಾಲಯಗಳು ಪ್ರತಿ ಮನೆಗಳಲ್ಲಿ ಇರಬೇಕು. ಪುಸ್ತಕಗಳನ್ನು ಓದುವುದು ಧ್ಯಾನಕ್ಕೆ ಸಮನಾಗಿದ್ದು, ದೈನಂದಿನ ಒತ್ತಡಗಳಿಂದ ಮುಕ್ತಿ ದೊರೆಯಲಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕೃಷ್ಣಾ ನಾಯಕ ಹಿಚ್ಕಡ, ಯಮುನಾ ಗಾಂವಕರ, ಶ್ರೀದೇವಿ ಕೆರೆಮೆನ, ಎನ್.ಜಿ.ನಾಯ್ಕ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾರವಾರದಲ್ಲಿ ಪ್ರೀತಿಪದ ಪುಸ್ತಕ ಮನೆ, ಸುಪ್ತಶ್ರೀ ಪುಸ್ತಕ ಮನೆ, ಹರ್ಷಗಿರಿ ಪುಸ್ತಕ ಮನೆಗಳಿಗೆ ಮಾನಸ ಅವರು ಭೇಟಿ ನೀಡಿದರು. ಗ್ರಂಥಾಲಯಗಳನ್ನು ವೀಕ್ಷಿಸಿ ಓದುಗರನ್ನು ಹುರಿದುಂಬಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-20-2104449538

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.