ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ

Last Updated 29 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಲೆಗ್ರಾಂಡ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22

ವಿವರ: ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ಬಿ.ಟೆಕ್‌/ ಬಿ.ಇ /ಬಿ. ಆರ್ಕಿಟೆಕ್ಟ್‌ನಲ್ಲಿ ಓದಲು ಇಚ್ಛಿಸುವ ವಿದ್ಯಾರ್ಥಿನಿಯರು ಈ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ಟ್ಯೂಷನ್‌ ಶುಲ್ಕದ ಶೇ 60ರಷ್ಟು ಅಥವಾ ವರ್ಷಕ್ಕೆ ₹ 60 ಸಾವಿರ (ಯಾವುದು ಕಡಿಮೆ ಇದೆಯೋ ಅದು)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/LFL3

***

ಝೂವಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಎನ್‌ಆರ್‌ಸಿ ಜೂನಿಯರ್‌ ರೀಸರ್ಚ್‌ ಫೆಲೋಶಿಪ್‌ (ಜೆಆರ್‌ಎಫ್‌) 2021.

ವಿವರ: ಎಂಎಸ್‌ಸಿ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ: ಸಂದರ್ಶನದ ವೇಳೆಗೆ ಅಭ್ಯರ್ಥಿಗೆ 28 ವರ್ಷ ಆಗಿರಬೇಕು. ಜತೆಗೆ ಎಂಎಸ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು. ಲೈಫ್‌ ಸೈನ್ಸ್‌/ ಫಾರೆಸ್ಟ್ರಿ/ ಝೂವಾಲಜಿ/ ಆರ್ನಿಥಾಲಜಿಯಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿರಬೇಕು.

ಆರ್ಥಿಕ ಸಹಾಯ: ತಿಂಗಳಿಗೆ ₹ 31 ಸಾವಿರ

ಕೊನೆಯ ದಿನಾಂಕ: 8 ಸೆಪ್ಟೆಂಬರ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅಥವಾ ಅಂಚೆ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/SNR5

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT