ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಆಕ್ಸಿಲೋಸ್ ಎಡೆವೇಟ್ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22

Last Updated 21 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಆಕ್ಸಿಲೋಸ್ ಎಡೆವೇಟ್ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2021–22

ವಿವರ: ಆಕ್ಸಿಲೋ ಫಿನ್ಸರ್ವ್ ಕಂಪನಿಯು 9ರಿಂದ 12ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಕೋವಿಡ್‌ ಕಾರಣದಿಂದಾಗಿ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡಿದ್ದರೆ ಅಥವಾ ಕೆಲಸ ಕಳೆದುಕೊಂಡಿದ್ದರೆ ಅಂಥ ಕುಟುಂಬದ ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷವನ್ನು ಮೀರಿರಬಾರದು.

ಆರ್ಥಿಕ ಸಹಾಯ: ₹30 ಸಾವಿರದವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಡಿಸೆಂಬರ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/AUES1

ಎಸ್‌ಟಿಎಫ್‌ಸಿ ಇಂಡಿಯಾ ಮೆರಿಟೋರಿಯಸ್‌ ಸ್ಕಾಲರ್‌ಶಿಪ್‌ ‍ಪ್ರೋಗ್ರಾಮ್‌ 2021

ವಿವರ: ಕಷ್ಟದಲ್ಲಿರುವ ವಾಣಿಜ್ಯ ಸಾರಿಗೆ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀರಾಮ್‌ ಟ್ರಾನ್ಸ್‌ಸ್ಫೋರ್ಟ್‌ ಫೈನಾನ್ಸ್‌ (ಎಸ್‌ಟಿಎಫ್‌ಸಿ) ಲಿಮಿಟೆಡ್‌ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಡಿಪ್ಲೊಮೊ/ಐಟಿಐ/ಪಾಲಿಟೆಕ್ನಿಕ್‌, ಪದವಿ, ಎಂಜಿನಿಯರಿಂಗ್‌ (3–4ನೇ ವರ್ಷ) ಓದುತ್ತಿರುವ ವಾಣಿಜ್ಯ ಸಾರಿಗೆ ಚಾಲಕರ ಮಕ್ಕಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 10 ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಶೇ 60 ರಷ್ಟು ಅಂಕ ಪಡೆದಿರಬೇಕು. ಕುಟುಂಬ ವಾರ್ಷಿಕ ಆದಾಯವು ₹4 ಲಕ್ಷ ಮೀರಿರಬಾರದು.

ಆರ್ಥಿಕ ಸಹಾಯ: ಐಟಿಐ/ಪಾಲಿಟೆಕ್ನಿಕ್‌/ಡಿಪ್ಲೊಮೊ ವಿದ್ಯಾರ್ಥಿಗಳಿಗೆ ₹15 ಸಾವಿರ (1 ವರ್ಷ) ಪದವಿ/ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ₹35 ಸಾವಿರ (4 ವರ್ಷ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/SIMD4

ಕೃಪೆ:buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT