ಶಿಡ್ಲಘಟ್ಟ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು, ಶ್ರದ್ಧೆ, ಭಕ್ತಿಯಿಂದ ವಿದ್ಯೆ ಕಲಿತರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಶಿಕ್ಷಕ ಆರ್.ಟಿ.ವೇಣುಗೋಪಾಲ್ ಹೇಳಿದರು.

ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ 2010-11ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಾಯೋಜಕರಾಗಿ, ಸಮಾಜಕ್ಕೆ ಉಪಕಾರ ಮಾಡುವಂತಹ ವ್ಯಕ್ತಿಗಳಾದಾಗ ಮಾತ್ರವೇ, ಶಿಕ್ಷಕನ ಜೀವನ ಸಾರ್ಥಕವಾಗುತ್ತದೆ ಎಂದರು.

ಹಿರಿಯ ಶಿಕ್ಷಕ ಜಿ.ಆರ್.ರಂಗಪ್ಪ ಮಾತನಾಡಿ, ಸ್ವಾರ್ಥ ತುಂಬಿರುವ ಸಮಾಜದಲ್ಲಿ ಇಂದಿಗೂ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು ಅವರು ಕಲಿಸಿರುವ ವಿದ್ಯೆಯನ್ನು ಸ್ಮರಿಸುವ ವಿದ್ಯಾರ್ಥಿಗಳಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಸಮಾಜದಲ್ಲಿ ನಾವು ಎಲ್ಲವನ್ನೂ ಪಡೆಯಬಹುದು. ಆದರೆ, ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಪರ್ಯಾಯವಾಗಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಕಲಿಸಿದ ವಿದ್ಯೆಯಿಂದ ನಾವು ಇಲ್ಲಿ ವ್ಯಕ್ತಿಗಳಾಗಿದ್ದೇವೆ. ಅವರ ಆಶೀರ್ವಾದ ಪಡೆಯುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಶಿಕ್ಷಕರನ್ನು ಗೌರವಿಸ ಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಂದಿನಿ, ಮುಖ್ಯಶಿಕ್ಷಕ ಎಚ್.ಎಂ.ಭಾಸ್ಕರ್, ಆರ್.ಮಂಜುಳಾ, ಸಿ.ಕೆಂಪಣ್ಣ, ಶಿವಕುಮಾರ್ ಬಾಬು ಪಟ್ಟೇದ್, ಕೆ.ಆರ್.ಆಶಾ, ಎಂ.ಸಿ.ರೇಣುಕಾ, ಜೆ.ಸುಷ್ಮಾ, ಸಿ.ಸುಜಾತ, ಮಾಲತೇಶ್ ಕೊರಚರ, ಡಿ.ವಿದ್ಯಾ, ಎಂ.ಬಿ.ಪೊನ್ನಮ್ಮ, ಎ.ನಾರಾಯಣ ಸ್ವಾಮಿ, ಗಾಯತ್ರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-16-930755751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.