ಸೂಲಿಬೆಲೆ(ಹೊಸಕೋಟೆ): ಜಾತಿ, ಮತ, ಪಂಥ, ದ್ವೇಷ, ಅಸೂಯೆಗಳು ಸುಳಿಯದ ಜ್ಞಾನ ದೇಗುಲಗಳಂತಿರುವ ಕಾಲೇಜುಗಳಲ್ಲಿ ಯಾವ ವಿದ್ಯಾರ್ಥಿ ಕಠಿಣ ಪರಿಶ್ರಮ, ಶ್ರದ್ದೆಯಿಂದ ತನ್ನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಜ್ಞಾನವನ್ನು ಸಿದ್ಧಿಸಿಕೊಳ್ಳುತ್ತಾನೋ ಆತ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗೋಪಾಲ್ ಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ಎನ್ಎಸ್ಎಸ್ ರೆಡ್ ಕ್ರಾಸ್ ಮುಕ್ತಾಯ ಸಮಾರಂಭ, ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ದರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಬೆಳೆಯುತ್ತ ಅಲ್ಪ ಮಾನವನಾಗುತ್ತಾನೆ. ಅಂತಹ ಅಲ್ಪ ಮಾನವನನ್ನು ಪುನಃ ವಿಶ್ವಮಾನವನನ್ನಾಗಿ ಮಾಡುವ ಶಕ್ತಿ ಕೇವಲ ಶಿಕ್ಷಕರಲ್ಲಿ ಮಾತ್ರ ಇರುತ್ತದೆ ಎಂಬ ಕುವೆಂಪು ಅವರ ಸಂದೇಶವನ್ನು ಮಕ್ಕಳು, ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಏಕೆಂದರೆ ಸಮಾಜದಲ್ಲಿ ಸಂಸ್ಕಾರವಂತ ಗುಣವನ್ನು ಕೇವಲ ಶಿಕ್ಷಕರಿಂದ ಮಾತ್ರ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಕ್ಷಣಿಕ ಆಕರ್ಷಣೆಗಳಿಗೆ ಒಳಗಾಗಿ ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ತಂದೆ–ತಾಯಿ ಶಿಕ್ಷಕ ಬಗೆಗೆ ಭಯ ಭಕ್ತಿ ಗೌರವ ಕಡಿಮೆಯಾಗುತ್ತಿರುವುದೇ ಕಾರಣ ಎಂದರು.

ಸೂಲಿಬೆಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಕಲ್ಪನಾ, ಮಕ್ಕಳು ಶಾಲಾ–ಕಾಲೇಜು ಹಂತದಲ್ಲೇ ಅಸಾಧಾರಣ ಜ್ಞಾನ ಗಳಿಸಿಕೊಳ್ಳಬೇಕು. ಕಾಲೇಜು ಹಂತದಲ್ಲೇ ಐಎಎಸ್ ಅಥವಾ ಐಪಿಎಸ್ ಕನಸನ್ನು ಸಾಕರಗೊಳಿಸಿಕೊಳ್ಳಲು ಸಿದ್ಧತೆ ಆರಂಭಿಸಬೇಕೆಂದ ಹೇಳಿದರು.

ಬಮುಲ್ ನಿರ್ದೇಶಕ ಸತೀಶ್ ಗೌಡ ವಿದ್ಯಾರ್ಥಿಗಳಿಗೂ ಉಚಿತವಾಗಿ ಸಮವಸ್ತ್ರಕೊಡಿಸುವುದಾಗಿ ಮತ್ತು ಶಾಸಕರ ಅನುಧಾನದಲ್ಲಿ 30 ಕಂಪ್ಯೂಟರ್ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಕೆ. ಮೋಹನ್ ಕುಮಾರ್, ನಿವೃತ್ತ ಅಧಿಕ್ಷಕ ಪುಲ್ಲಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬೆಟ್ಟಹಳ್ಳಿ ಗೋಪಿನಾಥ್, ಪ್ರಶಾಂತ್, ರವಿಚಂದ್ರ, ಭಾಗ್ಯಮ್ಮ, ಆನಂದ್, ಹಿರಿಯ ಪ್ರಾಧ್ಯಪಕ ಕೃಷ್ಣಪ್ಪ, ಆಶ್ವಥ್ ನಾರಾಯಣ್, ಸಂಗೀತ, ಬಾಲನಾಯಕ್, ಜಯರಾಮ್, ಚೆನ್ನಾಕೃಷ್ಣಪ್ಪ, ಮುನೆಗೌಡ, ಪಾರ್ವತಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-15-1105839919

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.