ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಅತಿಯಾದ ಶಾಖದ ಪರಿಣಾಮ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತವು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೇಸಿಗೆ ರಜೆಯನ್ನು ವಿಸ್ತರಿಸಿವೆ.

ಅನೇಕ ಪ್ರದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿರುವುದರಿಂದ, ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಲಿದೆ. ಹಾಗಾಗಿ, ಮಕ್ಕಳ ಹಿತದೃಷ್ಟಿಯಿಂದ ಬೇಸಿಗೆ ರಜೆ ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹವಾಮಾನ ಇಲಾಖೆಯು (ಐಎಂಡಿ) ಉತ್ತರ, ಮಧ್ಯ ಮತ್ತು ಪೂರ್ವ ಭಾರತದಾದ್ಯಂತ ತೀವ್ರ ಶಾಖದ ಮುನ್ನೆಚ್ಚರಿಕೆಯ ನೀಡಿದೆ. ಜೊತೆಗೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ.

ಬಿಹಾರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ಪಟ್ನಾ ಜಿಲ್ಲಾಡಳಿತವು ಶಾಲಾ ತರಗತಿಗಳ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದೆ. ಜಿಲ್ಲಾಡಳಿತದ ನಿರ್ದೇಶನದ ಅನ್ವಯ, 5ನೇ ತರಗತಿಯವರೆಗಿನ ಮೇ 22ರಿಂದ ಮೇ 26ರವರೆಗೆ ಸಂಪೂರ್ಣ ರಜೆ ನೀಡಲಾಗಿದೆ. 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಬೆಳಿಗ್ಗೆ 10:30ರವರೆಗೆ ಮಾತ್ರ ಶಾಲೆಗಳಿಗೆ ಹಾಜರಾಗಲು ಸೂಚಿಸಿದೆ.

ಮಧ್ಯಾಹ್ನದ ಸುಡು ಬಿಸಿಲಿನಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಡಳಿಯ ತಿಳಿಸಿದೆ.

ರಾಜ್ಯವಾರು ಶಾಲೆಗಳ ರಜಾ ವೇಳಾಪಟ್ಟಿ

ದೆಹಲಿ– ಮೇ 11ರಿಂದ ಜುಲೈ 1ರವರೆಗೆ

ಉತ್ತರ ಪ್ರದೇಶ– ಮೇ 20ರಿಂದ ಜೂನ್ 15ರವರೆಗೆ

ಬಿಹಾರ– ಜೂನ್ 1ರಿಂದ ಜೂನ್ 20ರವರೆಗೆ

ರಾಜಸ್ಥಾನ– ಮೇ 17ರಿಂದ ಜೂನ್ 20ರವರೆಗೆ

ಹರಿಯಾಣ– ಜೂನ್ 1ರಿಂದ ಜೂನ್ 30ರವರೆಗೆ

ಪಂಜಾಬ್– ಮೇ 25ರಿಂದ ಜುಲೈ 1ರವರೆಗೆ

ತೆಲಂಗಾಣ– ಏಪ್ರಿಲ್ 24 ರಿಂದ ಜೂನ್ 11ರವರೆಗೆ

ಆಂಧ್ರ ಪ್ರದೇಶ– ಏಪ್ರಿಲ್ 24ರಿಂದ ಜೂನ್ 11ರವರೆಗೆ

ಛತ್ತೀಸಗಢ– ಏಪ್ರಿಲ್ 20ರಿಂದ ಜೂನ್ 15ರವರೆಗೆ

ಪಶ್ಚಿಮ ಬಂಗಾಳ– ಮೇ 11ರಿಂದ ಮೇ 31ರವರೆಗೆ

ಪಟ್ನಾ– 5ನೇ ತರಗತಿಗಳವರೆಗೆ ಮೇ 26ರವರೆಗೆ ಸ್ಥಗಿತಗೊಳಿಸಲಾಗಿದೆ.

ಲಖನೌ– ಮೇ 22ರಿಂದ ಬೇಸಿಗೆ ರಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.