ಯಶಸ್ವಿ ಕಂಪನಿಗಳ ಹಿಂದೆ ಇರುವವರು ಯಾರು ಗೊತ್ತೇ? ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುವವರೆಗೆ ಎಲ್ಲ ಹಂತದ ಕೆಲಸಗಳನ್ನೂ ‘ಸ್ಮಾರ್ಟ್’ ಆಗಿ ನಿರ್ವಹಿಸುವವರು. ಅಂತಹ ಕೌಶಲ ಕರಗತಗೊಳಿಸುವ ಕೋರ್ಸ್ಗಳ ಮಾಹಿತಿ ಇಲ್ಲಿದೆ.

ಪ್ರತಿಷ್ಠಿತ ಕಂಪನಿಗಳಾದ ಅಮೆಜಾನ್, ಮೈಕ್ರೊಸಾಫ್ಟ್, ಒರ್ಯಾಕಲ್, ಸ್ಯಾಪ್, ಡಿಎಚ್ಎಲ್ನಂತಹವುಗಳ ಲಾಭದಾಯಕತೆಯ ಹಿಂದಿರುವ ನಿಜವಾದ ಗುಟ್ಟು ಏನು? ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಹೆಚ್ಚಿನ ಉತ್ಪಾದಕತೆ ಮತ್ತು ಗ್ರಾಹಕಕೇಂದ್ರಿತ ಕಾರ್ಯವೈಖರಿ– ಇವೆಲ್ಲವೂ ಯಶಸ್ಸಿನ ಮೂಲಾಧಾರಗಳು.

ಇವೇ ತತ್ವಗಳು ಮಿಲಿಟರಿ ಕಾರ್ಯಾಚರಣೆಯಲ್ಲಿಯೂ ಕಾಣಿಸಿಕೊಳ್ಳು ತ್ತವೆ. ಮಿಲಿಟರಿ ಸಾಮಗ್ರಿ ಮತ್ತು ಸೇವೆಗಳನ್ನು ಸರಿಯಾದ ಸಮಯದಲ್ಲಿ ಖರೀದಿಸಿ, ಉತ್ಪಾದಿಸಿ, ತಲುಪಿಸುವ ಸಮನ್ವಯ ವ್ಯವಸ್ಥೆಯೇ ಯಶಸ್ಸಿಗೆ ಪ್ರಮುಖ ಕಾರಣ. ಈ ಕಾರ್ಯಾಚರಣೆಗಳ ಸಂಕೀರ್ಣತೆ ಹೆಚ್ಚಾದಂತೆ ‘ಸಪ್ಲೈ ಚೇನ್ ಮ್ಯಾನೇಜ್ಮೆಂಟ್’ ಮತ್ತು ‘ಲಾಜಿಸ್ಟಿಕ್ಸ್’ ಎಂಬ ಪರಿಕಲ್ಪನೆಗಳು ಮೊದಲಿಗೆ ಮಿಲಿಟರಿ ಕ್ಷೇತ್ರದಲ್ಲೇ ರೂಪುಗೊಂಡವು.

20ನೇ ಶತಮಾನದವರೆಗೆ ವ್ಯಾಪಾರ ಸಂಸ್ಥೆಗಳಲ್ಲಿ ಕಮರ್ಷಿಯಲ್ ಮ್ಯಾನೇಜರ್, ಪರ್ಚೇಸ್ ಮ್ಯಾನೇಜರ್ ಮತ್ತು ವೇರ್ಹೌಸ್ ಮ್ಯಾನೇಜರ್ ಈ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಆದರೆ ಕೈಗಾರಿಕಾ ವಿಸ್ತರಣೆ, ಜಾಗತೀಕರಣ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಪರಿಣಾಮವಾಗಿ ಈ ಕಾರ್ಯಗಳ ವ್ಯಾಪ್ತಿ ಮತ್ತು ಸಂಕೀರ್ಣತೆ ಹೆಚ್ಚಿತು. ಜೊತೆಗೆ, ಸ್ಪರ್ಧಾತ್ಮಕ ವ್ಯಾಪಾರ ಪರಿಸರದಲ್ಲಿ, ವೆಚ್ಚ ನಿಯಂತ್ರಣ ಮತ್ತು ಲಾಭದಾಯಕತೆಯ ನಡುವೆ ಇರುವ ನೇರ ಸಂಬಂಧ ಸ್ಪಷ್ಟವಾಯಿತು.

ಈ ಕಾರಣದಿಂದ, ಇಂದಿನ ಜಾಗತಿಕ ವ್ಯಾಪಾರ ಜಗತ್ತಿನಲ್ಲಿ ಸರಕುಗಳ ಉತ್ಪಾದನೆ, ಸಂಗ್ರಹ ಮತ್ತು ವಿತರಣೆಯನ್ನು ಸಮಗ್ರವಾಗಿ ಸಮನ್ವಯಗೊಳಿಸುವ ಪ್ರಮುಖ ಕ್ಷೇತ್ರವಾಗಿ ಸಪ್ಲೈ ಚೇನ್ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆ ಹೊರಹೊಮ್ಮಿದೆ.

ಈ ಕ್ಷೇತ್ರದ ಮುಖ್ಯ ಗುರಿಯೆಂದರೆ, ಉತ್ಕೃಷ್ಟ ಗುಣಮಟ್ಟದ ಉತ್ಪಾದನಾ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದು ಹಾಗೂ ಅಂತಿಮವಾಗಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಮತ್ತು ಸಮಯೋಚಿತವಾಗಿ ಗ್ರಾಹಕರಿಗೆ ವಿತರಿಸುವುದು. ಉತ್ಪಾದನೆಯಿಂದ ಗ್ರಾಹಕರಿಗೆ ತಲುಪುವವರೆಗಿನ ಪ್ರತಿ ಹಂತವನ್ನೂ ಸಮರ್ಪಕವಾಗಿ ನಿರ್ವಹಿಸುವ ಮೂಲಕ, ಈ ಕ್ಷೇತ್ರವು ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ, ಗ್ರಾಹಕರ ಸಂತೃಪ್ತಿಯನ್ನೂ ವೃದ್ಧಿಸುತ್ತದೆ. ಭಾರತದ ಆರ್ಥಿಕತೆಯಲ್ಲಿಯೂ ಈ ಕ್ಷೇತ್ರದ ಪಾತ್ರ ಮಹತ್ತರವಾಗಿದೆ.

ಜಿಡಿಪಿಗೆ ಶೇಕಡ 14ರಷ್ಟು ಕೊಡುಗೆ ನೀಡುವುದರೊಂದಿಗೆ, ಸುಮಾರು 2.2 ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿಸಿರುವ ಪ್ರಮುಖ ವಲಯವಾಗಿದೆ.

ಸಪ್ಲೈ ಚೇನ್ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯು ಇಂದಿನ ಜಾಗತಿಕ ವ್ಯಾಪಾರ ವ್ಯವಸ್ಥೆಯ ಹೃದಯಭಾಗವಾಗಿದೆ. ಎಐ, ಡಿಜಿಟಲ್ ತಂತ್ರಜ್ಞಾನ, ರೋಬೊಟಿಕ್ಸ್ ಮತ್ತು ಡೇಟಾ ವಿಶ್ಲೇಷಣೆಗಳ ಬಳಕೆಯಿಂದ ಈ ಕ್ಷೇತ್ರದ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದ್ಯೋಗಾವಕಾಶಗಳ ವ್ಯಾಪ್ತಿ ಮತ್ತು ವೃತ್ತಿ ಬೆಳವಣಿಗೆಯ ಸಾಧ್ಯತೆಗಳನ್ನು ಗಮನಿಸಿದರೆ, ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ.

ಉದ್ಯೋಗಾವಕಾಶ

ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವ್ಯಾಪಕವಾಗಿವೆ :

• ಸಪ್ಲೈ ಚೇನ್ ಮ್ಯಾನೇಜರ್

• ಲಾಜಿಸ್ಟಿಕ್ಸ್ ಹೆಡ್

• ಆಪರೇಷನ್ಸ್ ಮ್ಯಾನೇಜರ್

• ಪ್ರೊಕ್ಯೂರ್ಮೆಂಟ್ ಮ್ಯಾನೇಜರ್

• ವೆಂಡರ್ ಮ್ಯಾನೇಜರ್

• ಎಸ್ಸಿಎಂ ಮ್ಯಾನೇಜರ್

• ಇ-ಕಾಮರ್ಸ್ ಲಾಜಿಸ್ಟಿಕ್ಸ್ ಸ್ಪೆಷಲಿಸ್ಟ್...

ಇ-ಕಾಮರ್ಸ್, ಉತ್ಪಾದನೆ, ಎಫ್ಎಂಸಿಜಿ, ರೀಟೇಲ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರಗಳಲ್ಲಿ ಈ ವೃತ್ತಿಗಳಿಗೆ ನಿರಂತರ ಬೇಡಿಕೆ ಇದೆ.

ಈ ಕೋರ್ಸ್ ಆಯ್ದುಕೊಳ್ಳಿ

ಈ ಕ್ಷೇತ್ರದಲ್ಲಿ ವೃತ್ತಿಪರರಾಗಲು ವಿದ್ಯಾರ್ಥಿಗಳು ಕೆಳಗಿನ ಕೋರ್ಸ್ಗಳನ್ನು ಆಯ್ದುಕೊಳ್ಳಬಹುದು:

• ಬಿಬಿಎ/ಬಿಕಾಂ (ಲಾಜಿಸ್ಟಿಕ್ಸ್/ಸಪ್ಲೈ ಚೇನ್ ಮ್ಯಾನೇಜ್ಮೆಂಟ್)

• ಎಂಬಿಎ (ಲಾಜಿಸ್ಟಿಕ್ಸ್/ಸಪ್ಲೈ ಚೇನ್ ಮ್ಯಾನೇಜ್ಮೆಂಟ್)

• ಪಿ.ಜಿ ಡಿಪ್ಲೊಮಾ (ಲಾಜಿಸ್ಟಿಕ್ಸ್/ಸಪ್ಲೈ ಚೇನ್ ಮ್ಯಾನೇಜ್ಮೆಂಟ್)

• ಅಲ್ಪಾವಧಿ ಮತ್ತು ದೀರ್ಘಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳು

ಅಧ್ಯಯನ ವಿಷಯಗಳಲ್ಲಿ ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ಮೆಂಟ್, ಆಪರೇಷನ್ಸ್ ಮ್ಯಾನೇಜ್ಮೆಂಟ್, ಇನ್ವೆಂಟರಿ ಮ್ಯಾನೇಜ್ಮೆಂಟ್,
ಟ್ರಾನ್ಸ್ಪೋರ್ಟೇಷನ್, ಡೇಟಾ ಅನಲಿಟಿಕ್ಸ್, ಇಂಟರ್ನ್ಯಾಷನಲ್ ಟ್ರೇಡ್, ಕಾಸ್ಟ್ ಮ್ಯಾನೇಜ್ಮೆಂಟ್ ಮುಂತಾದವು ಸೇರಿವೆ.

ಈ ಕ್ಷೇತ್ರದ ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕ್ರೈಸ್ಟ್, ಜೈನ್, ಮಣಿಪಾಲ್, ಎಸ್.ಪಿ. ಜೈನ್ ಮತ್ತು ಸಿಂಬಯಾಸಿಸ್ ಹೆಸರಾಗಿವೆ.

ಕ್ಷೇತ್ರದ ಪ್ರಮುಖ ಕಾರ್ಯ

• ಯೋಜನೆ (ಪ್ಲ್ಯಾನಿಂಗ್)

• ಕಚ್ಚಾ ಹಾಗೂ ಸಂಸ್ಕರಿಸಿದ ಪದಾರ್ಥಗಳ ಖರೀದಿ (ಸೋರ್ಸಿಂಗ್)

• ಉತ್ಪಾದನೆ (ಮ್ಯಾನ್ಯುಫ್ಯಾಕ್ಚರಿಂಗ್)

• ಸಂಗ್ರಹ ಮತ್ತು ದಾಸ್ತಾನು ನಿಯಂತ್ರಣ (ಸ್ಟೋರೇಜ್ ಆ್ಯಂಡ್ ಇನ್ವೆಂಟರಿ ಕಂಟ್ರೋಲ್)

• ಸಾಗಣೆ ಮತ್ತು ವಿತರಣೆ (ಟ್ರಾನ್ಸ್ಪೋರ್ಟೇಷನ್ ಆ್ಯಂಡ್ ಡಿಸ್ಟ್ರಿಬ್ಯೂಷನ್)

• ಗ್ರಾಹಕ ಸೇವೆ (ಕಸ್ಟಮರ್ ಸರ್ವಿಸ್)

ಈ ಎಲ್ಲಾ ಚಟುವಟಿಕೆಗಳು ಪರಸ್ಪರ ಸಂಬಂಧ ಹೊಂದಿದ್ದು, ಒಟ್ಟಾರೆ ಸಮನ್ವಿತ ಪರಿಣಾಮವನ್ನು ಉಂಟುಮಾಡುತ್ತವೆ. ಇದರ ಫಲವಾಗಿ ಸಂಸ್ಥೆಯ ಕಾರ್ಯಾ ಚರಣೆಗಳು ಹೆಚ್ಚು ಸುಗಮ ಮತ್ತು ಪರಿಣಾಮಕಾರಿಯಾಗುತ್ತವೆ.

ಲೇಖಕ: ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-1098149297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.