ಸುರಪುರ: ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ, ಧೈರ್ಯ ತುಂಬುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ’ ಎಂದು ವಕೀಲರಾದ ಜಯಲಲಿತಾ ಪಾಟೀಲ ಹೇಳಿದರು.

ನಗರದ ಜನನಿ ಮಹಿಳಾ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಯಾದಗಿರಿ ಮತ್ತು ಜನನಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ರೇಂಜರ್ಸಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಉತ್ತಮ ಪ್ರಜೆಗಳಾಗಲು ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ನಿರಂತರ ಪ್ರೇರೇಪಣೆ ಸಿಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಸಮಾಜ ಸೇವೆಗೆ ಸದಾ ಸಿದ್ಧರಾಗಿರುತ್ತಾರೆ. ಪ್ರಾಕೃತಿಕ ವಿಪತ್ತುಗಳು, ಸ್ವಚ್ಛತಾ ಅಭಿಯಾನ ಹೀಗೆ ವಿವಿಧ ಸಹಾಯಕ ಕಾರ್ಯಗಳಲ್ಲಿ ಭಾಗವಹಿಸಿ ಜನರಿಗೆ ನೆರವಾಗುತ್ತಾರೆ. ಯುವ ಜನರನ್ನು ಒಳ್ಳೆಯ ನಾಗರಿಕರನ್ನಾಗಿ ರೂಪಿಸಿ, ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ. ಸೇವೆಯೇ ಪರಮ ಧರ್ಮ ಎಂಬ ಸಂದೇಶವನ್ನು ಕಾರ್ಯರೂಪದಲ್ಲಿ ತೋರಿಸುತ್ತದೆ’ ಎಂದರು.

ಜಿಲ್ಲಾ ತರಬೇತುದಾರ ಬಸವರಾಜ ಗೋಗಿ ಅವರು ರಾಜ್ಯ, ರಾಷ್ಟ್ರ ಪುರಸ್ಕಾರ ಹಾಗೂ ಸ್ಕೌಟಿಂಗ್ ಚಳವಳಿಯ ಉಗಮ, ಬೆಳವಣಿಗೆ ಬಗ್ಗೆ ವಿವರಿಸಿದರು. ಯಾದಗಿರಿ ಜಿಲ್ಲಾ ಸಂಚಾಲಕಿ ನಾಗರತ್ನ ಪಾಟೀಲ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಮಹತ್ವ, ಪ್ರತಿಜ್ಞೆ ನಿಯಮ, ಪ್ರಾರ್ಥನೆಗಳ ಬಗ್ಗೆ ತಿಳಿಸಿದರು.

ಪ್ರಾಂಶುಪಾಲ ತಿರುಪತಿ ಕೆಂಭಾವಿ ಅಧ್ಯಕ್ಷತೆ ವಹಿಸಿದ್ದರು. ಗೈಡ್ಸ್ನ ತಾಲ್ಲೂಕು ಕಾರ್ಯದರ್ಶಿ ರಾಜಶೇಖರ ದೇಸಾಯಿ, ಉಪನ್ಯಾಸಕರಾದ ಮಹೇಶಕುಮಾರ ಗಂಜಿ, ಅಂಬ್ರೇಶ ಚಿಲ್ಲಾಳ, ಬೀರೇಶ ಕೊಡೇಸೂರ, ನಬಿಸಾಬ್ ನಾಯ್ಕೋಡಿ, ಶ್ರೀದೇವಿ ನಾಯಕ, ಸವಿತಾ ಸುಗೂರ, ಜ್ಯೋತಿ, ಶ್ರುತಿಗೌಡ, ದೀಪಾ ಪಾಟೀಲ ಉಪಸ್ಥಿತದ್ದರು. ಲತಾ, ಮಮತಾ ನಿರೂಪಿಸಿದರು. ಸುಶ್ಮಾ ಸ್ವಾಗತಿಸಿದರು. ರೇಣುಕಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-30-186753806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.