ಸುರಪುರ: ‘ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಖಂಡಿತ ಉತ್ತಮ ಭವಿಷ್ಯವಿದೆ. ಎಸ್ಎಸ್ಎಲ್ಸಿ ಉನ್ನತ ಅಭ್ಯಾಸಕ್ಕೆ ಹೋಗುವ ಪ್ರಥಮ ಮಾರ್ಗ. ಪಿಯುಸಿಯ ಉತ್ಕೃಷ್ಟ ಕಾಲೇಜುಗಳಲ್ಲಿ ನಿಮಗೆ ಪ್ರವೇಶ ದೊರಕುತ್ತದೆ’ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜಾ ಕುಮಾರನಾಯಕ ಹೇಳಿದರು.

ನಗರದ ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ವಿಪ್ರ ಕಣ್ವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಶಿಕ್ಷಣವೇ ಶಕ್ತಿ ಎಂದು ದಾರ್ಶನಿಕರು ಹೇಳಿದ್ದಾರೆ. ಈ ಭಾಗದಲ್ಲಿ ಈಗ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಭಾಗದ 4 ಜನರು ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗಿರುವುದು ಇದಕ್ಕೆ ನಿದರ್ಶನ. ನೀವೂ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದು ಶುಭಕೋರಿದರು.

ಭೂಮಿಕಾ ರಾಘವೇಂದ್ರಾಚಾರ್ಯ ಶಾಂತಪುರ (ಶೇ 96), ಎಂ.ಸಂದೇಶ ದತ್ತಾತ್ರೇಯ ಕುಲಕರ್ಣಿ (ಶೇ 93), ಪ್ರಾರ್ಥನಾ ಶ್ರೀನಿವಾಸರಾವ ಯಡಹಳ್ಳಿ (ಶೇ 92) ಅವರನ್ನು ಸನ್ಮಾನಿಸಲಾಯಿತು.

ಕೃಷ್ಣಾಚಾರ್ಯ ದೇವರು, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಗೋವಿಂದರಾಜ ದೇವರು, ರಾಘವೇಂದ್ರಾಚಾರ್ಯ ರಾಜಪುರೋಹಿತ ಶಾಂತಪುರ, ಶ್ರೀನಿವಾಸ ಸಿಂಧಗಿರಿ, ವೆಂಕಟೇಶ ಕಾಮನಟಗಿ, ರಾಘವೇಂದ್ರ ಮುನಮುಟಗಿ, ಮಲ್ಲಾರಾವ ಪಟವಾರಿ, ಚಂದ್ರಕಾಂತ ನಾಡಗೌಡ, ವೆಂಕಟೇಶ ಕುರಿಹಾಳ, ಭೀಮಾಶಂಕರ ದೇಶಪಾಂಡೆ, ವೆಂಕಟೇಶ ಅರಳಹಳ್ಳಿ, ದತ್ತಾತ್ರೇಯ ಕುಲಕರ್ಣಿ, ರಾಘವೇಂದ್ರ ಬಾಗಲಕೋಟ, ಮುರುಳೀಧರ ಐಕೂರ, ಪ್ರಕಾಶ ಲಾಯದಹುಣಸಿ ಸೇರಿದಂತ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-30-839634092

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.