ಸುರಪುರ: ‘ನಿರಂತರ ಪರಿಶ್ರಮದಿಂದ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂತಸ ತಂದಿದೆ’ ಎಂದು ಕೋಲಿ ಕಬ್ಬಲಿಗ ಸಮಾಜದ ಮಾಜಿ ಅಧ್ಯಕ್ಷ ಬಿ.ಬಿ.ಶಿವಣ್ಣ ಕಟ್ಟಿಮನಿ ಹೇಳಿದರು.

ನಗರದ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೋಲಿ ಕಬ್ಬಲಿಗ ಸಮಾಜದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿದರೆ ಕೋಲಿಕಬ್ಬಲಿಗ ಸಮಾಜದ ಓದುತ್ತಿರುವ ಇತರ ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ. ಅಲ್ಲದೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಅತ್ಯುನ್ನತ ಹುದ್ದೆಗೆ ಅಲಂಕರಿಸಬಹುದು’ ಎಂದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಸೃಷ್ಠಿ ಮಲ್ಲಿಕಾರ್ಜುನ (ಶೇ 96), ರಂಜಿತಾ ರಮೇಶ (ಶೇ 94.56), ಕಾವೇರಿ ಸಂತೋಷ (ಶೇ 85.52), ಸೃಷ್ಠಿ ಲಕ್ಷ್ಮೀಕಾಂತ್ (ಶೇ 83), ಭಾಗ್ಯಶ್ರೀ ವೆಂಕಟೇಶ (ಶೇ 82), ಪವನ ಲಕ್ಷ್ಮಣ (ಶೇ 80.96), ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ರಮ್ಯಾ ದೇವಿಂದ್ರಪ್ಪ, ರತ್ನಮ್ಮ ವೆಂಕಟೇಶ, ಎಂಬಿಎ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ದಯಸಾಗರ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.

ಪ್ರೌಢಶಾಲೆ ಶಿಕ್ಷಕ ಮಹೇಶ ಹುಜರತಿ, ಎಂಬಿಎ ವಿದ್ಯಾರ್ಥಿ ದಯಸಾಗರ, ಪತ್ರಕರ್ತ ನಾಗರಾಜ ನ್ಯಾಮತಿ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಮಾನಪ್ಪ ಚಳ್ಳಿಗಿಡ, ನಗರಸಭೆ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಜಟ್ಟೆಪ್ಪ ವಾರಿ, ಪರಶುರಾಮ ಚಳ್ಳಿಗಿಡ, ಶಿವರಾಮ ಭೋವಿ ಶಹಾಪುರಕರ್, ವೆಂಕಟೇಶ ಚಳ್ಳಿಗಿಡ, ಕವಡಿಮಟ್ಟಿ ಮರೆಯಪ್ಪ, ಮಲ್ಲಿಕಾರ್ಜುನ, ರಾಯಪ್ಪ ಶಹಾಪುರಕರ್, ರಮೇಶ ದರಬಾರಿ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-30-198438202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.