ತರೀಕೆರೆ: ‘ತಾಯಿಯ ನಿಃಸ್ವಾರ್ಥ ಪ್ರೀತಿಯನ್ನು ಸಂಭ್ರಮಿಸಬೇಕು. ಆಕೆ ಮಾಡಿದ ಭೋಜನವನ್ನು ಒಟ್ಟಾಗಿ ಮಕ್ಕಳ ಜೊತೆ ಹಂಚಿಕೊಂಡು ತಿನ್ನುವ ಉತ್ತಮವಾದ ಗುಣವನ್ನು ಬೆಳೆಸುವ ಒಂದು ಸುಂದರ ಪರಿಕಲ್ಪನೆಯೇ ಮಾತೃ ಭೋಜನ’ ಎಂದು ತರೀಕೆರೆ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಟಿ.ಜಿ. ಶಶಾಂಕ್ ಹೇಳಿದರು.

ತರೀಕೆರೆ ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ಸ್ವಾಮಿ ವಿವೇಕಾನಂದ ಸ್ಕೌಟ್ಸ್ ಮತ್ತು ಸುನಿತಾ ವಿಲಿಯಂ ಗೈಡ್ಸ್ ಘಟಕಗಳ ಆಶ್ರಯದಲ್ಲಿ ಶಾಲೆಯ ಮಕ್ಕಳಿಗಾಗಿ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಚಿಕ್ಕಮಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿ ನೀಲಕಂಠಾಚಾರ್ಯ, ಮಕ್ಕಳು ಹಾಗೂ ಪೋಷಕರ ನಡುವಿನ ಬಾಂಧವ್ಯ, ಆತ್ಮೀಯತೆ ಹಾಗೂ ತಾಯಿ ಮಗುವಿನ ಸಂಬಂಧ, ಮಾತೃ ಭೋಜನದ ಘನತೆಯನ್ನು ಹೆಚ್ಚಿಸಿದೆ. ಮನೆಯಲ್ಲಿ ತಯಾರಿಸಿದ ಶುದ್ಧ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಇದೊಂದು ಉತ್ತಮ ವೇದಿಕೆ ಎಂದರು.

ಅತಿಥಿಗಳಾಗಿದ್ದ ರಾಧಮ್ಮ ಗೋಪಿನಾಥ್, ಅಶ್ವಿನಿ ಶಶಾಂಕ್ ಹಾಗೂ ಗೈಡ್ಸ್ ಕ್ಯಾಪ್ಟನ್ ರಮ್ಯಾ ಅವರು ಮತ್ತು ಪೋಷಕರು ಮಕ್ಕಳಿಗೆ ಕೈತುತ್ತು ನೀಡಿದರು.

ಶಾಲೆಯ ಪ್ರಾಂಶುಪಾಲ ಕಾರ್ತಿಕೇಯನ್ ಮಾತನಾಡಿದರು. ಶಾಲೆಯ ಗೈಡ್ಸ್ ಕ್ಯಾಪ್ಟನ್ ಶಬಾನ ಸುಲ್ತಾನ, ಸ್ಕೌಟ್ಸ್ ಮಾಸ್ಟರ್ ವಸಂತಕುಮಾರ ಬಿ.ಎಸ್., ಶಾಲಾ ಮಕ್ಕಳ ಪೋಷಕರು, ಶಿಕ್ಷಕರು ಭಾಗವಹಿಸಿದ್ದರು.

ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶ್ರೇಯ ಸ್ವಾಗತಿಸಿದರು. ಲೇಖನ ಹಾಗೂ ತನ್ವಿ ನಿರೂಪಿಸಿದರು. ಆದಿತ್ಯ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-126-1614514738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.