ತರೀಕೆರೆ: ‘ವಿದ್ಯಾರ್ಥಿಗಳು ತಾವೇ ತಮ್ಮ ಜೀವನದ ಶಿಲ್ಪಿಗಳಾಗಬೇಕು’ ಎಂದು ಲಿಂಗದಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಯಪ್ಪ ಸಿ.ಆರ್. ಹೇಳಿದರು.

ಪಟ್ಟಣದ ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ 2025– 26ನೇ ಶೈಕ್ಷಣಿಕ ಸಾಲಿನ ಕ್ರೀಡೆ, ಎನ್.ಎಸ್.ಎಸ್, ಯುವ ರೆಡ್ಕ್ರಾಸ್, ಸಾಂಸ್ಕೃತಿಕ ಹಾಗೂ ವಿದ್ಯಾರ್ಥಿ ಒಕ್ಕೂಟ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಸಮಯದ ಮಹತ್ವ ಅರಿತುಕೊಳ್ಳಬೇಕು. ನಿಮ್ಮನ್ನು ಮುನ್ನಡೆಸುವ ಶಕ್ತಿ ನಿಮ್ಮಲ್ಲೇ ಇರುವುದರಿಂದ ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಮಾನಸ ಪದವಿಪೂರ್ವ ಕಾಲೇಜಿನ ಉದಯಶಂಕರ್ ಎಲ್.ಜಿ. ಮಾತನಾಡಿ, ‘ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳಬೇಕು. ಓದಿದ ಕಾಲೇಜಿನ ಬಗ್ಗೆ ಅಭಿಮಾನ ಹೊಂದಿ ಶ್ರದ್ಧೆಯಿಂದ ಕಲಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸಬೇಕು’ ಎಂದರು.

ಎಸ್.ಜೆ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮರಾಜ್ ಟಿ.ಎಸ್. ಮಾತನಾಡಿ, ‘ಸರಳ ಜೀವನ, ಉತ್ತಮ ಆಹಾರ, ಯೋಗ ಮತ್ತು ಪ್ರಾಣಾಯಾಮವನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಕೆ.ಜಿ. ಚವ್ಹಾಣ್ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವರಾಜಕುಮಾರ ಕೆ. ವರದಿ ಮಂಡಿಸಿದರು. ಐಕ್ಯುಎಸಿ ಸಂಯೋಜಕ ಸದಾಶಿವನಾಯ್ಕ ಎ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಿಸಿದರು.

2024– 25ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಬಿ.ಎ. ವಿಭಾಗದ ಶಾರೂನ್ ಫರ್ನಾಂಡಿಸ್ ಹಾಗೂ ಬಿ.ಕಾಂ. ವಿಭಾಗದ ಇಂದುಶ್ರೀ ಅವರಿಗೆ ದತ್ತಿ ನಿಧಿ ಪುರಸ್ಕಾರದ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಅನುಷ ಜೆ.ಪಿ., ಸುವರ್ಣ ಎನ್., ಸಹನಾ ಕೆ., ಉಮ್ಮೆರುಖಯ್ಯಾ, ಸಿಬ್ಬಂದಿ, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-126-138268272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.