ಕಲಬುರಗಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆ ‘ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್’ (ಬೈಟ್ಸ್) ಜಂಟಿಯಾಗಿ ಆಯೋಜಿಸುವ ಎಂಜಿನಿಯರಿಂಗ್ ಐಟಿ ಕ್ವಿಜ್ ‘ಟಿಸಿಎಸ್ ಟೆಕ್-ಬೈಟ್ಸ್' ನ 17ನೇ ಆವೃತ್ತಿಗೆ ಚಾಲನೆ ದೊರೆತಿದ್ದು, ಈ ಕ್ವಿಜ್ಗೆ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು (ಬಿಇ/ ಬಿಟೆಕ್) ತಮ್ಮ ತಾಂತ್ರಿಕ ಜ್ಞಾನ ಪ್ರದರ್ಶಿಸಬಹುದು. ಪ್ರವೇಶ ಪತ್ರಗಳನ್ನು ಆಯಾ ಸಂಸ್ಥೆಗಳು ಏಪ್ರಿಲ್ 13ರಂದು ಅಥವಾ ಅದಕ್ಕೂ ಮೊದಲು manager@bites.org.inಗೆ ಕಳುಹಿಸಬೇಕು.

ಈ ಸ್ಪರ್ಧೆಯು ಕಲಬುರಗಿ (ಏಪ್ರಿಲ್ 15), ಹುಬ್ಬಳ್ಳಿ (ಏಪ್ರಿಲ್ 17), ಮಂಗಳೂರು (ಏಪ್ರಿಲ್ 22), ಮೈಸೂರು (ಏಪ್ರಿಲ್ 24), ತುಮಕೂರು (ಮೇ 2) ಮತ್ತು ಬೆಂಗಳೂರಿನಲ್ಲಿ (ಮೇ 5) ನಡೆಯಲಿದೆ. ಅಂತಿಮ ಹಂತದ ಸ್ಪರ್ಧೆಯು ಮೇ 5ರಂದು ಬೆಂಗಳೂರಿನಲ್ಲಿ ಜರುಗಲಿದೆ. ಪ್ರತಿ ಪ್ರಾದೇಶಿಕ ಹಂತದ ವಿಜೇತರು ಮತ್ತು ದ್ವಿತೀಯ ಸ್ಥಾನ ಪಡೆದವರು ಕ್ರಮವಾಗಿ ₹12 ಸಾವಿರ ಮತ್ತು ₹10 ಸಾವಿರ ಮೌಲ್ಯದ ಗಿಫ್ಟ್ ವೋಚರ್ ಪಡೆಯಲಿದ್ದಾರೆ. ಅಂತಿಮ ಸ್ಪರ್ಧೆ ವಿಜೇತರು ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ಕ್ರಮವಾಗಿ ₹85 ಸಾವಿರ ಮತ್ತು ₹50 ಸಾವಿರ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿವೇತನ ಸೇರಿದಂತೆ ಇತರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-34-1592405174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.