ತೆಕ್ಕಲಕೋಟೆ: ಗ್ರಾಮೀಣ ಪ್ರತಿಭೆ ಗುರು ತಿಸುವ ಹಾಗೂ ವಿವಿಧತೆಯ ಮೂಲಕ ಏಕತೆ ಸಾಧಿಸುವ ರಂಗಭೂಮಿ ಮತ್ತು ಕಲಾವಿದರ ಕಾರ್ಯ ಶ್ಲಾಘನೀಯ ಎಂದು ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕ ಎಸ್.ಎಂ.ನಾಗರಾಜಸ್ವಾಮಿ ಹೇಳಿದರು.

ಸಿರಿಗೇರಿ ಗ್ರಾಮದ ಜೆ.ಎಚ್.ವಿ.ಶಾಲೆಯ ಆವರಣದಲ್ಲಿ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುರುವಾರ ನಡೆದ ಎರಡು ದಿನಗಳ ಸಾಂಸ್ಕೃತಿಕ ಉತ್ಸವ ಸಮಾರೋಪದಲ್ಲಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗ ರಾಜ, ಜೆ.ಎಚ್.ವಿ. ಸಂಸ್ಥೆಯ ಆಡಳಿತಾ ಧಿಕಾರಿ ಶಿವಲೀಲಾ, ಬಿ. ಶಿವರಾಮ್, ಬಿ. ಪುನೀತ್ ಕುಮಾರ್, ಅಮೃತೇಶ, ಮುಖ್ಯಶಿಕ್ಷಕ ಜೆ.ಎಚ್.ವಿ ವಿರುಪಾಕ್ಷಿಗೌಡ ಮಾತನಾಡಿದರು.

ಸಾಂಸ್ಕೃತಿಕ ಉತ್ಸವದಲ್ಲಿ ರಂಗ ಸಂಗೀತ, ಕಂಸಾಳೆ ನೃತ್ಯ, ಕಪ್ಪೆರಾಯ ನಾಟಕ, ಕಳ್ಳನ ಕರಾಮತ್ತು ನಾಟಕ, ಡೊಳ್ಳು ಕುಣಿತ, ಮೂಕ ಅಭಿನಯ, ರಾಮ ರಾವಣರ ಯುದ್ಧ ನಾಟಕ, ಇತಿಹಾಸ ಪುರುಷ ಹರಳಯ್ಯ ನಾಟಕ, ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಕಲಾ ತಂಡಗಳು ಅದ್ದೂರಿಯಾಗಿ ಪ್ರದರ್ಶಿಸಲ್ಪಟ್ಟವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-1828922120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.