ಔರಾದ್: ತಾಲ್ಲೂಕಿನ ಗಡಿಭಾಗದ ಕನ್ನಡಿಗರ ಶಿಕ್ಷಣದ ಆಶಾಕಿರಣವಾಗಿರುವ ತೆಲಂಗಾಣ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.

ಕಳೆದ ಐದು ದಶಕದಿಂದ ಗಡಿಭಾಗದಲ್ಲಿ ಕನ್ನಡದಲ್ಲಿ ಶಿಕ್ಷಣ ನೀಡುತ್ತಿರುವ 100 ಕನ್ನಡ ಶಾಲೆಗಳ ಪೈಕಿ 10 ಶಾಲೆಗಳಷ್ಟೇ ಉಳಿದಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ನೆಪದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಯತ್ನ ನಡೆಯುತ್ತಿರುವುದು ಗಡಿಭಾಗದ ಕನ್ನಡಿಗರಲ್ಲಿ ಆತಂಕ ಉಂಟುಮಾಡಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ಕನ್ನಡ ಮಾಧ್ಯಮ ಶಾಲೆಗಳು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿವೆ. ಆದರೆ ಈಗ ಶಿಕ್ಷಕರ ಕೊರತೆ, ಮೂಲಸೌಲಭ್ಯ ಕೊರತೆ ಹಾಗೂ ಸರ್ಕಾರಗಳ ನಿರ್ಲಕ್ಷ್ಯದಿಂದ ಶಾಲೆಗಳ ಉಳಿವು ಕಷ್ಟವಾಗಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯ ಕನ್ನಡಿಗರು.

ತೆಲಂಗಾಣದ ನಾರಾಯಣಖೇಡ ತಾಲ್ಲೂಕಿನ ಕಾರಾಮಂಗಿ, ಶಿಖರಖಾನಾ, ಗೌಂಡಗಾಂವ, ಔದಾತಪುರ, ಎಸಗಿ, ಗೊಂದೆಗಾಂವ, ಮೋರ್ಗಿ, ಶಹಾಪುರ, ರತ್ನಾಪುರ, ಮೈನಳ್ಳಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ವಿಶೇಷ ಕಾಳಜಿ ವಹಿಸಬೇಕಿದೆ ಎನ್ನುತ್ತಾರೆ ಗಡಿ ಕನ್ನಡಿಗರು.

ಕನ್ನಡ ಶಾಲೆ ಉಳಿವಿಗೆ ಶ್ರಮಿಸಿದ್ದ ಲಿಂ.ಪಟ್ಟದ್ದೇವರು: ತೆಲಂಗಾಣದ ಕಾರಾಮುಂಗಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ಪರೀಕ್ಷೆ ನಡೆಸಲು ಅಂದು ಚನ್ನಬಸವ ಪಟ್ಟದ್ದೇವರು ಸರ್ಕಾರಕ್ಕೆ ₹10 ಸಾವಿರ ದೇಣಿಗೆ ನೀಡಿ ಅನುಮತಿ ಪಡೆದಿದ್ದರು. ಈ ಮೂಲಕ ಗಡಿಯಲ್ಲಿ ಕನ್ನಡ ಶಾಲೆಯ ಉಳಿವಿಗೆ ಶ್ರಮಿಸಿದ್ದರು. ಆದರೆ ಇಂದು ಈ ಕನ್ನಡ ಶಾಲೆ ಉಳಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಕನ್ನಡ ಶಾಲೆಗಳ ಹೋರಾಟಗಾರ ಕಾಶಿನಾಥ ಗಡ್ಡೆ ಹೇಳಿದರು.

ಕನ್ನಡ ಶಾಲೆಗಳ ಸ್ಥಿತಿಗತಿ ವರದಿ ಸಲ್ಲಿಕೆಗೆ ಆಗ್ರಹ: ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲು ಕರ್ನಾಟಕ ಸರ್ಕಾರ ಆದೇಶ ಮಾಡಿದೆ. ಈಗಾಗಲೇ ಬೆಳಗಾವಿ ಹಾಗೂ ರಾಯಚೂರು ಜಿಲ್ಲಾಡಳಿತ ತಮ್ಮ ವ್ಯಾಪ್ತಿಯ ಕನ್ನಡ ಶಾಲೆಗಳು ಹಾಗೂ ಅಲ್ಲಿಯ ಕನ್ನಡಿಗರನ್ನು ಭೇಟಿ ಮಾಹಿತಿ ಸಂಗ್ರಹಿಸಿವೆ. ಬೀದರ್ ಜಿಲ್ಲಾಡಳಿತವೂ ಜಿಲ್ಲೆಗೆ ಹೊಂದಿಕೊಂಡಿರುವ ಹೊರನಾಡು ಕನ್ನಡ ಮಾಧ್ಯಮ ಶಾಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಹೈದರಾಬಾದ್ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಆಗ್ರಹಿಸಿದರು.

29ರಂದು ಉನ್ನತ ಮಟ್ಟದ ಸಭೆ: ಗಡಿನಾಡು, ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಕನ್ನಡಿಗರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಕುರಿತು ಸಮಾಲೋಚಿಸಲು ಮೇ29ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.