ತೇರದಾಳ: ಶಿಕ್ಷಣ ಇಂದು ಜಾಗತಿಕ ಮಟ್ಟದಲ್ಲಿ ತನ್ನದೆಯಾದ ಮಹತ್ವ ಪಡೆದುಕೊಳ್ಳುತ್ತಿದೆ. ಬದುಕಿನ ನೆಲೆಗೆ ಶಿಕ್ಷಣವೇ ಮೂಲ ಅಸ್ತ್ರವಾಗಿದೆ. ಆದ್ದರಿಂದ ರೈತರ ಮಕ್ಕಳೂ ಕೂಡ ಉನ್ನತ ಪಡೆಯುವಂತಾಗಲಿ ಎಂದು ಅವಳಿ ಜಿಲ್ಲಾ ಕೆಎಂಎಫ್ ನಿರ್ದೇಶಕ ಲಕ್ಕಪ್ಪ ಪಾಟೀಲ ಹೇಳಿದರು.

ತೇರದಾಳ ತಾಲ್ಲೂಕಿನಾದ್ಯಂತ ರೈತ ಕಲ್ಯಾಣ ಸಂಘ ಯೋಜನೆಯಡಿ ಹಾಲು ಉತ್ಪಾದಕರ ಸಂಘ ಮಕ್ಕಳಿಗೆ ಈಚೆಗೆ ಪಟ್ಟಣದಲ್ಲಿ ಕೆಎಂಎಫ್ನಿಂದ ಶಿಷ್ಯ ವೇತನ ಹಾಗೂ ಮರಣ ಹೊಂದಿದ ಸಂಘದ ಸದಸ್ಯರ ವಾರಸುದಾರರಿಗೆ ಸಹಾಯ ಧನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಎಂಎಫ್ ಸಂಸ್ಥೆಯಿಂದ ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳಿವೆ. ಮೇಲಿಂದ ಮೇಲೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಒಕ್ಕೂಟದ ಅಧಿಕಾರಿ ಎಸ್.ಎಸ್. ಅಥಣಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ವ್ಯವಸ್ಥಾಪಕರಾದ ಸಂಗೀತಾ ಬೆಂಡೆ, ಪರಮೇಶ ಜಾಧವ, ಶ್ರೀದೇವಿ ಆದಬಸವ್ವಗೋಳ, ಜಬೀನಾ ಲಾಡಖಾನ್ ಹಾಗೂ ವಿಸ್ತರಣಾಧಿಕಾರಿಗಳು ಸಂಘಗಳ ಕಾರ್ಯದರ್ಶಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-19-649295021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.