ತಿಳವಳ್ಳಿ: ರಾಜ್ಯದಾದ್ಯಂತ ಸೋಮವಾರ ಸರ್ಕಾರಿ ಶಾಲೆಗಳು ಆರಂಭಗೊಂಡವು. ತಿಳವಳ್ಳಿ ಕ್ಲಾಸ್ಟರನ ವಿವಿಧೆಡೆಯ ಶಾಲೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಹಲವೆಡೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಶಾಲೆಗೆ ಸ್ವಾಗತ ಕೋರಲಾಯಿತು. ಸಮವಸ್ತ್ರ, ಪುಸ್ತಕಗಳನ್ನು ವಿತರಿಸಿ, ಸಿಹಿಯೂಟ ಬಡಿಸಿದರು. ಮೊದಲ ದಿನ ಮಕ್ಕಳು ಸಂಭ್ರಮಿಸಿದರು.

ಸಮೀಪದ ಹೊಂಕಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಶಾಲೆಯನ್ನು ಸ್ವಚ್ಛಗೊಳಿಸಿ, ಬಣ್ಣ ಬಳೆಯಲಾಗಿತ್ತು. ಮಾವಿನ ತೋರಣದಿಂದ ಸಿಂಗಾರ ಮಾಡಲಾಗಿತ್ತು. ಸಿ.ಆರ್.ಪಿ, ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು ಶಾಲೆಯ ಗೇಟ್ ಬಳಿ ನಿಂತುಕೊಂಡು ಶಾಲೆಗೆ ಬರುವ ಮಕ್ಕಳಿಗೆ ನೋಟ್ ಬುಕ್, ಪೇನ್ ನೀಡಿ ಪುಷ್ಪಾರ್ಚನೆ ಮಾಡಿ ಸ್ವಾಗತ ಮಾಡಲಾಯಿತು.

ಸಿ.ಆರ್.ಪಿ ಈರೇಶ ಚಕ್ಕಡಿ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಆಲಸ್ಯ ಬೇಡ. ಇಂದಿನ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಬಹುತೇಕರು ಕನ್ನಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂಬುದೇ ಹೆಮ್ಮೆಯ ವಿಚಾರ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದ್ದು, ಮಹಾತ್ಮಗಾಂಧೀಜಿ ಕಂಡಂತಹ ಸ್ವರಾಜ್ಯದ ಪರಿಕಲ್ಪನೆಯಿಂದ. ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿವಹಿಸಿ ಪದವೀಧರರಾದರೇ ಜೀವನದ ಗುಣಮಟ್ಟ ಮತ್ತು ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಂ.ಬಿ.ಮರಿಗೌಡ್ರ, ರಮೇಶ ಅರಶಿನಗುಪ್ಪಿ, ಯುವರಾಜ ದಳವಾಯಿ, ವಿರೇಂದ್ರ ನವಾತಿ, ಮೇನಕಾ ಕಾಳಿ, ಸುಧಾ ಹಾಲಮ್ಮನವರ, ಸಾವಿತ್ರಾ ಬಳ್ಳಾರಿ, ಚಂದ್ರಶೇಖರ ಪಾಟೀಲ, ಪ್ರೇಮಾ ಹಾವೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-22-1032900973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.