ತಿ.ನರಸೀಪುರ: 25 ವರ್ಷಗಳ ಹಿಂದೆ ತಮಗೆ ಪಾಠ ಕಲಿಸಿದ ತಿ.ನರಸೀಪುರ ಪಿಆರ್ಎಂ ಪ್ರೌಢಶಾಲೆಯ 2001 -04ರ ತಂಡದ ವಿದ್ಯಾರ್ಥಿಗಳು (ಪ್ರಸ್ತುತ ಶಾಲೆ ಮುಚ್ಚಿದೆ) ಗುರುಗಳಿಗೆ ಗೌರವ ವಂದನೆ ಸಲ್ಲಿಸಿ ಅಭಿನಂದಿಸಿದರು.

ನಗರದ ಹೊರ ವಲಯದ ಕ್ಯಾಂಪಿನ್ ಗ್ರೌಂಡ್ ರೆಸಾರ್ಟ್ ಆವರಣದಲ್ಲಿ ಭಾನುವಾರ ನಡೆದ ಗುರುವಂದನೆ ಹಾಗೂ ಪುನರ್ ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಕರು ನೀಡಿದ ಮಾರ್ಗದರ್ಶನ, ಪ್ರೋತ್ಸಾಹದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮೌಲ್ಯಯುತ ಜೀವನ ಕಂಡುಕೊಳ್ಳಲು ಪ್ರೌಢಶಾಲೆಯಲ್ಲಿ ನಮಗೆ ದೊರೆತ ಶಿಕ್ಷಕರೇ ಕಾರಣ ಎಂದು ಅಭಿಪ್ರಾಯಪಟ್ಟರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಬಿ.ರಾಜೇಶ್, ‘ಬದುಕನ್ನು ನಿರೀಕ್ಷೆಯಲ್ಲಿಟ್ಟು ಸಾಗಿದರೆ ಸಾಧಿಸುವುದಿಲ್ಲ. ವಾಸ್ತವದಲ್ಲಿ ಬದುಕುವುದನ್ನು ಕಲಿತರೆ ಸಾಧನೆ ಜತೆಗೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ’ ಎಂದು ತಿಳಿಸಿ ಶುಭ ಕೋರಿದರು.

ಶಿಕ್ಷಕಿ ಆರ್. ಅನುರಾಧ ಮಾತನಾಡಿ, ‘25 ವರ್ಷಗಳ ಹಿಂದೆ ಬೋಧನೆ ಮಾಡಿದ ಶಿಕ್ಷಕರನ್ನು ಒಂದೆಡೆ ಸೇರಿಸಿ ಅವರಿಗೆ ಗುರು ವಂದನೆ ಸಲ್ಲಿಸಿರುವ ಈ ಚಟುವಟಿಕೆ ನಿಮ್ಮೊಳಗಿನ ಒಳ್ಳೆಯ ಸಂಸ್ಕಾರದ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಮುಂದೆಯೂ ಇಂತಹ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು’ ಎಂದರು.

ಶಿಕ್ಷಕರಾದ ಉಮಾಮಹೇಶ್ವರಿ ಹಾಗೂ ವೆಂಕಟಕೃಷ್ಣ ಮಾತನಾಡಿ, ‘ಗುರುಗಳನ್ನು ತಾತ್ಸಾರವಾಗಿ ಕಾಣುವ ಈ ದಿನಗಳಲ್ಲಿ 25 ವರ್ಷಗಳ ಹಿಂದೆ ಬೋಧಿಸಿದ್ದ ಶಿಕ್ಷಕರನ್ನು ಒಂದೆಡೆ ಸೇರಿಸಿ ವಿದ್ಯಾರ್ಥಿಗಳ ಪ್ರಯತ್ನ ಪ್ರಶಂಶನೀಯ’ ಎಂದರು.

ಇದೇ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಆಟಗಳ ಸ್ಪರ್ಧೆ ಏರ್ಪಡಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವರದರಾಜ್, ಶಿಕ್ಷಕ ಎಂ. ಮಹದೇವ್, ವಿದ್ಯಾರ್ಥಿಗಳಾದ ಗಗನ್, ವೀರೇಶ್, ವೇಣು, ರಶ್ಮಿ ಗೌಡ, ಎಂ. ಮಂಜುನಾಥ್, ಪ್ರದೀಪ್ ಚೌ, ಪ್ರಮೋದ್, ಬಿ.ಸ್ವಾಮಿ ಮಂಜುನಾಥ್, ಆರ್. ಚೈತ್ರಾ, ನಿಸರ್ಗ, ಕಾವ್ಯ, ಶೃತಿ, ಡಿ. ಮಂಜುಳಾ, ಮಧುನಾಯಕ್, ಸುಜಯ್, ನಾರಾಯಣ್, ದೀಪಿಕಾ, ಪಿ.ಶ್ವೇತಾ, ಎಂ.ವಿಕಾಸ್, ಜಗದೀಶ್, ಡಾ. ಬಿ.ಪುನೀತ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-38-1626017202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.