ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ರೀಡೆ ಸಾಂಸ್ಕೃತಿಕ, ಎನ್ಎಸ್ಎಸ್, ಎನ್ಸಿಸಿ, ಯುವ ರೆಡ್ಕ್ರಾಸ್ ಇನ್ನಿತರ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್ವಿಪಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ, ಯುವಶಕ್ತಿ ಪ್ರವಾಹ ಇದ್ದಂತೆ. ದೇಶದ ಯುವಶಕ್ತಿಯನ್ನು ವ್ಯರ್ಥ ಮಾಡಬಾರದು, ಸದ್ಭಳಕೆ ಮಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಮಹಾತ್ಮ ಗಾಂಧೀಜಿ ಎನ್ಎಸ್ಎಸ್ ಪ್ರಾರಂಭಿಸಿದ್ದರು ಎಂದು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲಿ ಅತಿ ದೊಡ್ಡ ಪದವಿ ಕಾಲೇಜಾಗಿ ಹೊರಹೊಮ್ಮಿದೆ. ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ 3ರಿಂದ 4ಸಾವಿರ ಇದ್ದು, ರಾಜ್ಯದಲ್ಲಿಯೇ ದಾಖಲೆ ಪ್ರವೇಶಾತಿ ಪಡೆದ ಹೆಗ್ಗಳಿಗೆ ಹೊಂದಿದೆ ಎಂದರು.

ಸಾಹಿತಿ ಚಿಕ್ಕಮಗಳೂರಿನ ಚಟ್ನಳ್ಳಿ ಮಹೇಶ್ ಮಾತನಾಡಿ, ಯುವಶಕ್ತಿಗೆ ಸರಿಯಾದ ದಾರಿಯಲ್ಲಿ ನಡೆಯುವ ಮಾರ್ಗದರ್ಶನ ಅವಶ್ಯಕ. ಇಲ್ಲವಾದರೆ ಸಮಾಜಕ್ಕೆ ದುಸ್ವಪ್ನವಾಗುತ್ತದೆ. ಶಿಕ್ಷಣದ ಜೊತೆ ಸಾಹಿತ್ಯ ಓದಬೇಕು. ಕನಿಷ್ಠ ದಿನದ ಅರ್ಧ ಗಂಟೆಯಾದರೂ ಪಠ್ಯೇತರ ಸಾಹಿತ್ಯ ಓದಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಶಶಿಕುಮಾರ್ ಎಚ್.ಸಿ., ಉಪನ್ಯಾಸಕರಾದ ಸ್ಮಿತಾ ಎಚ್.ಎಸ್., ಭಾವನ, ಸುಭದ್ರಮ್ಮ, ಸಯ್ಯದ್ ಪಾಷ ಉಪಸ್ಥಿತರಿದ್ದರು. ತೇಜಸ್ವಿನಿ ಜಿ.ಎಂ., ಮೋಹನ್ಕುಮಾರ್ ನಿರೂಪಿಸಿ, ಅನುಪ್ರಸಾದ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-17-1542505014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.