ತುರುವೇಕೆರೆ: ಬುದ್ದ, ಬಸವಣ್ಣನ ಸಮತೆ, ಕಾರುಣ್ಯಗಳ ಜೊತೆಗೆ ಅಂಬೇಡ್ಕರ್ ಚಿಂತನೆಗಳೂ ಸಮಕಾಲೀನ ಸಮಾಜಕ್ಕೆ ಜರೂರು ಎಂದು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜು ಇ. ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಮಂಗವಾರ ನಡೆದ ಬಿ.ಆರ್.ಅಂಬೇಡ್ಕರ್ ಜಯಂತಿ, ಬಾಬು ಜಗಜೀವನ್ ರಾಂ ಜಯಂತಿಯಲ್ಲಿ ಮಾತನಾಡಿದರು.

ಸಂವಿಧಾನವನ್ನು ಸಂಪೂರ್ಣವಾಗಿ ಓದಿದರಷ್ಟೇ ಅಂಬೇಡ್ಕರ್ ಗ್ರಹಿಕೆಗೆ ದಕ್ಕುತ್ತಾರೆ. ಸಂವಿಧಾನ ಓದು ಎಲ್ಲರದ್ದಾಗಬೇಕು. ಜಗತ್ತನಲ್ಲೇ ಬಲಿಷ್ಠ ಸಂವಿಧಾನ ಕೊಟ್ಟ ಅಂಬೇಡ್ಕರ್ ಜಾತಿ ಕಾರಣಕ್ಕೆ ಅವರನ್ನು ನಗಣ್ಯ ಮಾಡಲಾಯಿತೇ? ಒಂದು ವೇಳೆ ಸ್ಪರ್ಶ್ಯರಾಗಿದ್ದರೆ ಅವರ ಸ್ಥಾನಮಾನಗಳು ಎಲ್ಲಿ ಇರುತ್ತಿದ್ದವು ನೀವೇ ಉಹಿಸಿ. ದೇಶದ ಆರ್ಥಿಕ ಭದ್ರ ಬುನಾದಿಗಾಗಿ ಬ್ಯಾಂಕ್ಗಳ ಸ್ಥಾಪನೆ ಅಗತ್ಯ ಎಂದರು. ಆದರೆ ದೇಶದ ಎಷ್ಟು ಬ್ಯಾಂಕ್ಗಳಲ್ಲಿ ಇಂದು ಅವರ ಭಾವಚಿತ್ರವಿದೆ ಎಂದು ಪ್ರಶ್ನಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸಂವಿಧಾನ ಮತ್ತು ಕಾನೂನುಗಳು ಎಲ್ಲ ಜಾತಿಗೂ ಅನ್ವಯಿಸುವಾಗ ಈ ಜಾತಿ ವ್ಯವಸ್ಥೆಗೆ ಏಕೆ ಪ್ರಾಧಾನ್ಯ ನೀಡಬೇಕು ಎಂದರು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಿತು. ರಮೇಶ್ ರೈತಗೀತೆ ಹಾಡಿದರು. ಬಿಆರ್ಸಿ ಸುರೇಶ್ ಸಂವಿಧಾನ ಪೀಠಿಕೆ ಬೋಧಿಸಿದರು.

ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಇ.ಒ.ಅನಂತರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬಿಇಒ ಸೋಮಶೇಖರ್, ಸರ್ಕಾರಿ ನೌಕರರ ಸಂಘದ ಪಾಪಣ್ಣ, ಗುತ್ತಿಗೆದಾರ ಕಲ್ಲಬೋರನಹಳ್ಳಿ ಜಯರಾಮ್, ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್, ವಾಲ್ಮೀಕಿ ಸಮುದಾಯದ ವಸಂತ್ ಕುಮಾರ್, ದಸಂಸ ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-1927442324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.