ತುಮಕೂರು: ಶಿಕ್ಷಣವಂತರು ಹೆಚ್ಚಾದಂತೆ ಜಾತಿ, ವರ್ಗಗಳಲ್ಲಿ ಮತ್ತಷ್ಟು ಕಂದಕ ನಿರ್ಮಾಣವಾಗುತ್ತಿದೆ. ಇದೊಂದು ದುರಂತದ ಸನ್ನಿವೇಶ. ಇಂತಹ ಸಂದರ್ಭದಲ್ಲಿ ಲಕ್ಷ್ಮಣದಾಸ್ ಒಂದು ರೂಪಕವಾಗಿ, ಮುಖ್ಯವಾಹಿನಿಗೆ ಬರುವ ಪ್ರತಿಭೆಗಳಿಗೆ ಉತ್ತೇಜಕರಾಗಿ ಕಾಣಿಸುತ್ತಾರೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಲಕ್ಷ್ಮಣದಾಸ್ ಸಾಮಾಜಿಕ ಸೀಮೋಲ್ಲಂಘನೆ ಸಂಕೇತ. ತಳ ಸಮುದಾಯದಲ್ಲಿ ಹುಟ್ಟಿ, ಸಾಮಾಜಿಕ ಕಟ್ಟುಪಾಡು ಮೀರಿ ಮುಖ್ಯ ವಾಹಿನಿಗೆ ಬರುವುದು ಅತ್ಯಂತ ಕಠಿಣವಾದ ಕೆಲಸ. ಜಾತಿ ವ್ಯವಸ್ಥೆ, ವರ್ಣಾಶ್ರಮದ ಕರಾಳತೆ ಮೀರಿ ಮುಂದೆ ಸಾಗುವುದು ಸುಲಭವಲ್ಲ. ದಲಿತ ಸಮುದಾಯದಿಂದ ಬಂದು ಸಾಮಾಜಿಕ ಸೀಮೋಲ್ಲಂಘನೆ ಮಾಡಿರುವುದು ಬಹಳ ಮುಖ್ಯ ಎಂದರು.

ಶಿಕ್ಷಣದ ನಂತರ ಸಮಾಜದಲ್ಲಿ ಅನೇಕ ರೀತಿಯ ಸ್ಥಿತ್ಯಂತರಗಳು ನಡೆದಿದೆ. ಆದರೆ ಇಂದಿಗೂ ಅಮಾನವೀಯ ಘಟನೆಗಳು ನಡೆಯುತ್ತಿವೆ. ರಾಜಕೀಯ, ಜಾತಿ, ಧರ್ಮ ಜನರನ್ನು ಒಡೆಯುತ್ತಿವೆ. ಕಲೆಗೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ. ಸಮಾಜ ಒಗ್ಗೂಡಿಸುವ ಕಾರ್ಯ ಲಕ್ಷ್ಮಣದಾಸ್ ಅವರ ಮುಖಾಂತರ ಸಂಭವಿಸಿದೆ. ಇಂತಹ ಪ್ರತಿಭೆಗಳು ಹೆಚ್ಚಾದರೆ ಜನರಲ್ಲಿ ಭಾವೈಕ್ಯತೆ ಬರಲು ಸಾಧ್ಯ. ರಂಗಭೂಮಿಯಲ್ಲಿ ಇಂತಹ ಸಾಮರಸ್ಯ ಕಾಣಬಹುದು ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ‘ಜಿಲ್ಲೆಯಲ್ಲಿ ಗ್ರಾಮೀಣ ರಂಗಭೂಮಿಯನ್ನು ಸಶಕ್ತವಾಗಿ ಕಟ್ಟಲಾಗಿದೆ. ರಂಗಭೂಮಿ ಕಲಾವಿದರು ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ರಂಗಭೂಮಿ ಕಲಾವಿದರು ಸಂಘಟಿತರಾಗಬೇಕು’ ಎಂದು ತಿಳಿಸಿದರು.

ಲಕ್ಷ್ಮಣದಾಸ್ ಅವರನ್ನು ಅಭಿನಂದಿಸಲಾಯಿತು. ಇಡೀ ದಿನ ವಿವಿಧ ಗೋಷ್ಠಿಗಳು ನಡೆದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ, ಮುಖಂಡ ವಸಂತ ಮುರಳಿ, ಗೋಪಾಲಸ್ವಾಮಿ, ಎಸ್.ನಾಗಣ್ಣ, ವೈ.ಎನ್.ಶಿವಣ್ಣ, ಧನಿಯಾಕುಮಾರ್, ಟಿ.ವೈ.ಯೋಗಾನಂದಕುಮಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-17-854162893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.