ತುಮಕೂರು: ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ ಸಮಿತಿಯಿಂದ ಜಿಲ್ಲೆಯ ಮಾದಿಗ ಜನಾಂಗದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಕುರಿತು ಸಮಾಲೋಚನಾ ಸಭೆ ನಗರದಲ್ಲಿ ಭಾನುವಾರ ನಡೆಯಿತು.

ಮಾದಿಗ ಜನಾಂಗದ ಶ್ರೇಯೋಭಿವೃದ್ಧಿ ಒಳ ಗೊಂಡಿರುವ ಕರಪತ್ರವನ್ನು ಸಮುದಾ ಯದ ಪ್ರಮುಖರು ಬಿಡುಗಡೆ ಮಾಡಿದರು.

ಪರಿಶಿಷ್ಟರ ಜಾತಿ ನಿಂದನೆ ತಡೆ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಎ.ನರಸಿಂಹಮೂರ್ತಿ, ‘ಜಿಲ್ಲೆಯಲ್ಲಿರುವ ಮಾದಿಗ ಜನಾಂಗದ ಕುಲಮೂಲಗಳ ಅಧ್ಯಯನವನ್ನು ತುಮಕೂರು ವಿಶ್ವವಿದ್ಯಾಲಯದ ಬಾಬೂ ಜನಜೀವನರಾಮ್ ಅಧ್ಯಯನ ಕೇಂದ್ರದಿಂದ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಮಾದಿಗರ ಮೇಲಿನ ಜಾತಿ ಆಧಾರಿತ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ನಗರ ಪ್ರದೇಶದ 5 ಮಾದಿಗರ ಕಾಲೊನಿಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಲಿಕಾ ಕೇಂದ್ರ ಪ್ರಾರಂಭಿಸುವ ಮೂಲಕ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಪ್ರಮಾಣ ಕಡಿಮೆ ಮಾಡಬೇಕಿದೆ. ನಗರ ಪ್ರದೇಶದಲ್ಲಿ ಮಾದಿಗ ಸಮುದಾಯದ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಗಮನಹರಿಸಬೇಕಿದೆ ಎಂದು ಹೇಳಿದರು.

ಮುಖಂಡ ಗೋಪಾಲ್, ‘ಒಳಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ತಮ್ಮ ಮೂಲ ಜಾತಿಗಳ ಹೆಸರಿನಲ್ಲೇ ಪ್ರಮಾಣಪತ್ರ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಸಿದ್ಧಲಿಂಗಯ್ಯ, ‘ಜಾತಿ ನಿಂದನೆಯಾದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಪ್ರಕರಣ ದಾಖಲಿಸುವ ಬಗ್ಗೆ ತರಬೇತಿ ನೀಡಬೇಕಿದೆ’ ಎಂದರು.

ಸಮಿತಿ ಕಾರ್ಯದರ್ಶಿ ತೇಜಸ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್, ಪ್ರಮುಖರಾದ ಅನುಪಮ, ಕಿಶೋರ್, ನಿಖಿಲ್ ಮೋಹನ್, ಕೆಂಪರಾಜು, ಆಕಾಶ್, ಚಿಕ್ಕಓಬಳಯ್ಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-17-457220520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.