ತುಮಕೂರು: ‘ಮೌಢ್ಯ, ಸಮಾಜದ ಕೆಟ್ಟ ಸಂಪ್ರದಾಯಗಳು ಮುಟ್ಟನ್ನು ಅಸ್ಪೃಶ್ಯತೆಯ ನೆಲೆಯಲ್ಲಿ ನೋಡುತ್ತಿವೆ. ಹೆಣ್ಣು ಮಕ್ಕಳು ಶುಚಿತ್ವದ ಕಡೆಗೆ ಗಮನ ಹರಿಸಬೇಕು’ ಎಂದು ಪ್ರಸೂತಿ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಡಾ.ಬಸವರಾಜು ಹೇಳಿದರು.

ನಗರದಲ್ಲಿ ಶುಕ್ರವಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ಪ್ರಯುಕ್ತ ಆಯೋಜಿಸಿದ್ದ ಮುಟ್ಟಿನ ಶುಚಿತ್ವದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪ್ರದಾಯ, ಪದ್ಧತಿದ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಇಂದಿಗೂ ಕೀಳಾಗಿ ಕಾಣಲಾಗುತ್ತಿದೆ. ಮುಟ್ಟು ಸಹಜ ಕ್ರಿಯೆ. ಹೆಣ್ಣು ಮಕ್ಕಳು ಅಪೌಷ್ಟಿಕತೆ, ಮುಟ್ಟಿನ ಕುರಿತು ನಿರ್ಲಕ್ಷ್ಯ ವಹಿಸುವುದರಿಂದ ಗರ್ಭಕೋಶದ ಕ್ಯಾನ್ಸರ್ ಇತರೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಜೀವನ ಮತ್ತು ಆಹಾರ ಕ್ರಮ ಬದಲಾಗಬೇಕು. ಮುಟ್ಟನ್ನು ಮೈಲಿಗೆ ಎಂದು ಭಾವಿಸಬಾರದು ಎಂದು ಸಲಹೆ ಮಾಡಿದರು.

ವೈದ್ಯೆ ಮೌನಿಕಾ, ‘ಮುಟ್ಟಿನ ಸಮಯದಲ್ಲಿ ಮೂಢನಂಬಿಕೆಗೆ ಒಳಗಾಗದೆ ಶುಚಿತ್ವ ಕಾಪಾಡಿಕೊಳ್ಳಬೇಕು. ಮುಟ್ಟಿನ ಕಪ್ ಬಳಸಬೇಕು’ ಎಂದು ಮಾಹಿತಿ ನೀಡಿದರು.

ವೈದ್ಯೆ ರಜಿನಿ, ‘ಮುಟ್ಟಿನ ಸಮಯದಲ್ಲಿ ಬಟ್ಟೆಗಳನ್ನು ಒಣಗಿಸಿ ಬಳಸಿ, 6 ಗಂಟೆಗೂ ಹೆಚ್ಚಿನ ಸಮಯ ಪ್ಯಾಡ್ ಬಳಸಬೇಡಿ’ ಎಂದು ಅರಿವು ಮೂಡಿಸಿದರು.

ವೈದ್ಯ ಜೀವನ್ ರೆಡ್ಡಿ, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಅನುಪಮಾ, ತಿರುಮಲಯ್ಯ, ಅರುಣ್, ಶಾಂತಮ್ಮ, ಮುಬಾರಕ್, ಶಂಕ್ರಯ್ಯ, ಗುಲ್ನಾಜ್, ಪೂರ್ಣಿಮಾ, ಶಾರದಮ್ಮ, ಚಿಕ್ಕಗಂಗಮ್ಮ, ನಾಗರತ್ನಮ್ಮ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-17-1417400373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.