ತುಮಕೂರು: ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡವರು ಕೇವಲ ಕನಿಕರ ತೋರಿಸುವುದಕ್ಕಿಂತ ಸಮಸ್ಯೆಗೆ ಸ್ಪಂದಿಸುವ ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಹಾಗೂ ಸಮಾಜ ವಿಜ್ಞಾನಿ ಪ್ರೊ.ಅಂಬಾದಾಸ್ ವೈ.ಮೋಹಿತೆ ಸಲಹೆ ಮಾಡಿದರು.

ತುಮಕೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗವು ಭಾರತೀಯ ವೃತ್ತಿಪರ ಸಮಾಜ ಕಾರ್ಯಕರ್ತರ ಸಂಘದ ಸಹಕಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಸಮಾಜ ಕಾರ್ಯ ವಿದ್ಯಾರ್ಥಿಗಳ ಹಬ್ಬ ‘ಸ್ವರಂಗ್-2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಕಾರ್ಯ ವಿದ್ಯಾರ್ಥಿಗೆ ಸಹಾನುಭೂತಿ ಅತಿಮುಖ್ಯ. ವ್ಯಕ್ತಿಯ ನೋವನ್ನು ಅವರ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆಯಿಂದ ಕೇಳಿಸಿಕೊಂಡು ಸ್ಪಂದಿಸಬೇಕು ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ‘ಸಮಾಜ ಕಾರ್ಯದ ವೃತ್ತಿಪರ ನೈತಿಕತೆ ಪಾಲಿಸುವುದು ಅತಿಮುಖ್ಯ. ಫಲಾನುಭವಿಗಳ ವೈಯಕ್ತಿಕ ಮಾಹಿತಿ, ರಹಸ್ಯ ಕಾಪಾಡಬೇಕು. ತಾರತಮ್ಯವಿಲ್ಲದೆ ಜಾತಿ, ಧರ್ಮ, ಲಿಂಗ ಭೇದ ಮರೆತು ಸಮಾನವಾಗಿ ಕಾಣುವ ಗುಣವಿರಬೇಕು‘ ಎಂದು ತಿಳಿಸಿದರು.

ಸಾಮಾಜಿಕ ಬದಲಾವಣೆ ರಾತ್ರೋರಾತ್ರಿ ಸಂಭವಿಸುವುದಿಲ್ಲ. ಸವಾಲುಗಳು ಎದುರಾದಾಗ ಧೃತಿಗೆಡದೆ, ಸತತ ಪ್ರಯತ್ನ, ತಾಳ್ಮೆಯಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನಿಮ್ಹಾನ್ಸ್ನ ಪ್ರೊ.ಐ.ಎ.ಶರೀಫ್, ‘ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸಲು ಸಂವಿಧಾನ, ಮೂಲಭೂತ ಹಕ್ಕು, ಮಹಿಳೆ, ಮಕ್ಕಳ ರಕ್ಷಣಾ ಕಾಯ್ದೆ, ಮಾನವ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನವಿರಬೇಕು‘ ಎಂದು ಹೇಳಿದರು.

ಬೆಂಗಳೂರು ನಗರ ವಿ.ವಿ ಕುಲಪತಿ ಪ್ರೊ.ಬಿ.ರಮೇಶ್, ‘ಕಾರ್ಪೋರೇಟ್ ವಲಯದಲ್ಲಿ ಗುರುತಿಸಿಕೊಳ್ಳುವುದರ ಜತೆಗೆ ಸೇವೆಯಲ್ಲೂ ತೊಗಡಿಸಿಕೊಳ್ಳಬೇಕು‘ ಎಂದು ಸಲಹೆ ಮಾಡಿದರು.

ಸಿಂಡಿಕೇಟ್ ಸದಸ್ಯ ಎಚ್.ಆರ್.ಮನೋಜ್, ಕುಲಸಚಿವರಾದ ನಾಹಿದಾ ಜಮ್ ಜಮ್, ವಿ.ವಿ ಕಲಾ ನಿಕಾಯದ ಡೀನ್ ಹಾಗೂ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ಕೆ.ಜಿ.ಪರಶುರಾಮ, ಐಎಸ್ಪಿಎಸ್ಡಬ್ಲ್ಯೂ ಪ್ರಧಾನ ಕಾರ್ಯದರ್ಶಿ ಆರ್.ಧನಶೇಖರ ಪಾಂಡಿಯನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-17-629679233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.