ತುಮಕೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮೇ 28ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ ಹೇಳಿದರು.

ನಗರದ ಡಿಡಿಪಿಐ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಸಂಘದ ನೂತನ ಪದಾಧಿಕಾರಿಗಳು ಡಿಡಿಪಿಐ ಕೆ.ಜೆ.ರಘುಚಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುವಂತೆ ಕೋರಿದರು.

‘2025– 2031ರ ಅವಧಿಗೆ ಆಯ್ಕೆಯಾದ ಮಂಡಳಿಯಲ್ಲಿ ನುರಿತ ಶಿಕ್ಷಕರಿದ್ದಾರೆ. ಮಕ್ಕಳ ಸ್ನೇಹಿಯಾಗಿ ಕೆಲಸ ಮಾಡಲಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಹಕಾರ ನೀಡಬೇಕು. ಪದಗ್ರಹಣ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಭಾಗವಹಿಸಬೇಕು’ ಎಂದು ತಿಮ್ಮೇಗೌಡ ಮನವಿ ಮಾಡಿದರು.

‘ಜಿಲ್ಲೆಯ ಯಾವ ತಾಲ್ಲೂಕಿನ ಬಿಇಒ ಕಚೇರಿಯಲ್ಲಿಯೂ ಲಂಚಕ್ಕೆ ಆಸ್ಪದವಿಲ್ಲ. ಇದನ್ನು ಎಲ್ಲಾ ಶಿಕ್ಷಕರಿಗೆ ತಿಳಿಸಬೇಕು. ಸಂಘದ ಜತೆಗೆ ಇಲಾಖೆಯ ಗೌರವ ಎತ್ತಿ ಹಿಡಿಯಬೇಕು’ ಎಂದು ರಘುಚಂದ್ರ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಪರಮೇಶ್, ಮರುಳಸಿದ್ದಯ್ಯ, ಕೋಮಲಾ, ವಿಜಯಕುಮಾರ್, ಮೋಹನಕುಮಾರ್, ಸಂಗೀತ, ಎಂ.ಟಿ.ಭವ್ಯಾ, ಮಹೇಶ್, ಈಶ್ವರಯ್ಯ, ಬಸವರಾಜು, ಶ್ರೀನಿವಾಸ್, ಉಮೇಶ್, ಸವಿತಾ, ಮಂಗಳಗೌರಮ್ಮ, ನಂದಿನಿ, ಶಾಂತಕುಮಾರಿ, ಹರೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-1003862379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.