ತಿಪಟೂರು: ತಾಲ್ಲೂಕಿನ ಹೊನ್ನಹಳ್ಳಿ ಹೋಬಳಿ ಬಳಬನೇರಲು ಗ್ರಾಮದಲ್ಲಿ 2010-11ನೇ ಸಾಲಿನ ಎಸ್ಎಸ್ಎಲ್ಸಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಗುರುವಾರ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಶಿಕ್ಷಕರಾದ ಪುಟ್ಟಸ್ವಾಮಿ, ಕೆ.ಆರ್. ಹುಚ್ಚಪ್ಪ, ಮಲ್ಲಿಕಾರ್ಜುನ ಕೆ.ಸತೀಶ್, ವಿಜಯ ಪ್ರಕಾಶ್, ಶಂಕರ್ ಗುರು, ಟಿ.ಎನ್.ಗೀತಾರಾಣಿ ಎ.ಭಾಗ್ಯ ಹಾಗೂ ತ್ರಿವೇಣಿ ಅವರನ್ನು ಹಳೆ ವಿದ್ಯಾರ್ಥಿಗಳ ಸಂಘದಿಂದ ಸತ್ಕರಿಸಲಾಯಿತು.

ಶಿಕ್ಷಕ ಸತೀಶ್ ಮಾತನಾಡಿ, ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಶಿವರಾಮಶೆಟ್ಟಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಯೊಂದಿಗಿನ ಬಾಂಧವ್ಯವನ್ನು ಉಳಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಬಸವರಾಜು, ಪಿಡಿಒ ಗುರುಮೂರ್ತಿ, ಶಿಕ್ಷಕರಾದ ದಕ್ಷಿಣಮೂರ್ತಿ, ಸಿದ್ದಯ್ಯ, ಸುಂದರಮೂರ್ತಿ, ಸಿದ್ದಮಲ್ಲಪ್ಪ, ಮರುಳಪ್ಪ, ಶಿವಸ್ವಾಮಿ, ಮುಖ್ಯಶಿಕ್ಷಕ ಸತೀಶ್ ಜೆ.ಪಿ., ಪುಟ್ಟರಾಮೇಗೌಡ, ಶಿವರಾಮಶೆಟ್ಟಿ ಸೇರಿದಂತೆ 2010-11ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-17-692060751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.