ತುಮಕೂರು: ದಿನದ ಆರಂಭಕ್ಕೆ ಬೆಳಕು ಹೇಗೆ ಕಾರಣವೋ ಹಾಗೆಯೇ ಪ್ರಕೃತಿ ತನ್ನ ಒಡಲಿನಿಂದ ಬದುಕಿಗೆ ಹೊಸ ಹುಟ್ಟು, ಹೊಸತನವನ್ನು ಕೊಡುವುದೇ ವಸಂತೋತ್ಸವ ಎಂದು ಅಂಬೇಡ್ಕರ್ ಕಾಲೇಜು ಪ್ರಾಂಶುಪಾಲರಾದ ಶಶಿಕಲಾ ಪುಟ್ಟರಾಜು ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಬೆಳಗುಂಬದಲ್ಲಿ ಈಚೆಗೆ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ವಸಂತೋತ್ಸವ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ವನ್ಯ ಜೀವಿ ಜಾಗೃತಿ ವೇದಿಕೆ ಅಧ್ಯಕ್ಷ ಬಿ.ವಿ.ಗುಂಡಪ್ಪ, ‘ಮಕ್ಕಳಿಗೆ ಮೊಬೈಲ್ ಕೊಡದೆ ಪ್ರಕೃತಿ ಜತೆ ಬೆರೆಯುವಂತೆ ಮಾಡಬೇಕು. ಪ್ರಕೃತಿಯಲ್ಲಿರುವ ಮರ-ಗಿಡ, ವೈವಿಧ್ಯಮಯ ಜೀವ ಪ್ರಭೇದಗಳಾದ ಇರುವೆಗಳ ಚಲನೆ ಗಮನಿಸುವಂತೆ ಮಾಡಿ ಮಕ್ಕಳ ಚಿಂತನಾ ಶೀಲತೆ ಬೆಳಸಬೇಕು’ ಎಂದು ಸಲಹೆ ಮಾಡಿದರು.

ಉದ್ಯಮಿ ಸುಮಂತ್ ಗೋವಿಂದಪ್ಪ, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಲಿತ ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶೈಲಜಾ ಬಾಬು, ಪ್ರೇಮಾ ರಮೇಶ್, ರತ್ನ ನಾಗರಾಜು, ಸುವರ್ಣ ರಮೇಶ್, ಚಂದ್ರಕಲಾ, ಶಾರದಾ ನಾಗರಾಜು ಭಾಗವಹಿಸಿದ್ದರು.

ವಸಂತ ಋತುವಿನ ಕವಿಗೋಷ್ಠಿಯಲ್ಲಿ ಯಶೋದ ಕೃಷ್ಣ, ನೇತ್ರಾ ಗಿರೀಶ್, ಶೋಭಾ ಲಕ್ಷ್ಮಿಕಾಂತ್, ತ್ರಿವೇಣಿ ಇತರರು ಕವನ ವಾಚಿಸಿದರು. ಮಹಿಳೆಯರು ಪ್ರಕೃತಿ ಗೀತೆ ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-17-1345380999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.