ತುಮಕೂರು: ‘ನಿಮ್ಮ ಮಕ್ಕಳಿಗೆ ನೀವೇ ಆದರ್ಶ, ಮಾದರಿ. ನಮ್ಮನ್ನು ನೋಡಿದ ಮಕ್ಕಳು ನಮ್ಮಂತಾಗುವ ಬಯಕೆ ಹೊಂದಬೇಕು. ಅದೇ ನಿಜವಾದ ಸಾಧನೆ’ ಎಂದು ನ್ಯಾಯಾಧೀಶರಾದ ನೂರುನ್ನಿಸಾ ಹೇಳಿದರು.

ನಗರದಲ್ಲಿ ಶನಿವಾರ ಶೈನಾ ಅಧ್ಯಯನ ಸಂಸ್ಥೆ, ಜಿಲ್ಲಾ ಮಹಿಳಾ ಸಂಘಟನೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಎಲ್ಲ ರಂಗದಲ್ಲೂ ಸಾಧನೆ ಮಾಡಿದ್ದರೂ ಕೌಟುಂಬಿಕ ದೌರ್ಜನ್ಯ ನಿಂತಿಲ್ಲ. ತಾನು ದುಡಿದು ಸಂಪಾದಿಸಿದರೂ ಖರ್ಚು ಮಾಡುವಂತಿಲ್ಲ. ಹಣಕ್ಕಾಗಿ ಕೈಚಾಚುವ ಪರಿಸ್ಥಿತಿ ಇದೆ. ಮೊದಲು ಆರ್ಥಿಕ ಸ್ವಾವಲಂಬನೆಯತ್ತ ಮಹಿಳೆಯರು ಮುನ್ನಡೆಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜು, ‘ಪ್ರತಿಭಾವಂತ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದರೂ ಇಂದಿಗೂ ತನ್ನ ಅಸ್ಮಿತೆಗಾಗಿ ಹುಡುಕಾಟ ನಡೆಸಬೇಕಾಗಿದೆ. ಮನೆಯಲ್ಲಿ ಗಂಡ, ಅತ್ತೆ, ಮಾವ, ಕುಟುಂಬಸ್ಥರ ಮನಃಸ್ಥಿತಿ ಬದಲಾಯಿಸಬೇಕಿದೆ. ಅವರನ್ನು ಮನುಷ್ಯರನ್ನಾಗಿ ಮಾಡುವ, ಅರಿವಿನ ಕೊರತೆಯನ್ನು ನೀಗಿಸುವ ಕೆಲಸ ಮಾಡಬೇಕಾಗಿದೆ’ ಎಂದು ಸಲಹೆ ಮಾಡಿದರು.

ಸಮಾಜ ಸೇವಕಿ ಎನ್.ಲಕ್ಷ್ಮಿದೇವಮ್ಮ ಅವರಿಗೆ ಜಿಲ್ಲಾ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಮುಖರಾದ ಎಂ.ಪಿ.ಸುಶೀಲಮ್ಮ, ತಾಹೆರಾ ಕುಲ್ಸುಂ, ದೊಂಬರನಹಳ್ಳಿ ನಾಗರಾಜು, ಲಕ್ಷ್ಮಿನರಸಿಂಹಶೆಟ್ಟಿ, ಎಸ್.ಕೆ.ಗಿರಿರಾಜ್, ಎಚ್.ಶಂಕರಪ್ಪ, ಪಿ.ಜಿ.ಶಕುಂತಲ, ನಿರ್ಮಲ ಗೂಳರಿವೆ, ಗಾಯಕಿಯರಾದ ಮಾಧುರ್ಯ, ವೀಣಾ, ಮುತ್ಯಾಲಮ್ಮ, ಶಾಂತಕುಮಾರಿ, ಸಾವಿತ್ರಮ್ಮ, ಚಂದ್ರಕಲಾ, ಎಸ್.ಆರ್.ಪ್ರವೀಳಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-18-1994934136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.