ತುಮಕೂರು: ಯುವ ಜನರಲ್ಲಿ ಹುಸಿ ಸಂಕಲ್ಪಕ್ಕಿಂತ ದೃಢ ಸಂಕಲ್ಪವಿರಬೇಕು. ಚಿಂತನೆ, ಭಾವನೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವುದು ನಿಜವಾದ ಮೌಲ್ಯ ಎಂದು ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯುವ ಜನತೆಗೆ ಬೇಕಾದ ಜೀವನ ಮೌಲ್ಯ ಮತ್ತು ಸಾಹಿತ್ಯ’ ಕುರಿತು ಮಾತನಾಡಿದರು.

ಮೌಲ್ಯ ಎಂದರೆ ಕೇವಲ ಭೌತಿಕ ಬೆಲೆಯಲ್ಲ. ಯಾರೂ ಸಹ ರಾತ್ರೋರಾತ್ರಿ ದೊಡ್ಡವರಾಗಲು, ಪ್ರಸಿದ್ಧರಾಗಲು ಸಾಧ್ಯವಿಲ್ಲ. ನಿಷ್ಠೆ, ಏಕಾಗ್ರತೆ ಮತ್ತು ದೀರ್ಘಕಾಲದ ತಪಸ್ಸಿನಿಂದ ಮಾತ್ರ ಶ್ರೇಷ್ಠತೆ ಸಾಧ್ಯ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಅರಿವು ಮೂಡಬೇಕಾಗಿದೆ. ಪಠ್ಯದ ಮೂಲಕವೇ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ, ‘ವಿಶ್ವವಿದ್ಯಾಲಯದಲ್ಲಿ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಜ್ಞಾನದ ಆಹಾರ ನೀಡಲಾಗುತ್ತಿದೆ. ಪ್ರಸ್ತುತ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ವಿದ್ಯಾವಂತ ನಾಗರಿಕರೇ ಹೊರತು ಅನಾಗರಿಕರಲ್ಲ. ಇದರ ಪರಿಣಾಮವಾಗಿ ಹಲವಾರು ಕನಸು ಹೊತ್ತಿದ್ದ ಪುಟ್ಟ ಮನಸ್ಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೋಚನೀಯ’ ಎಂದು ವಿಷಾದಿಸಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ಎಸ್.ಮೋಹನ, ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರೊ.ಜಿ.ಸುದರ್ಶನ ರೆಡ್ಡಿ, ಸಂಚಾಲಕ ಎನ್.ಟಿ.ನೀಲಕಂಠ, ಕಲಾ ಕಾಲೇಜಿನ ಪ್ರಾಂಶುಪಾಲರಾದ ಜಿ.ದಾಕ್ಷಾಯಿಣಿ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-959050199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.