ತುರುವೇಕೆರೆ: ಮನುಷ್ಯ ಸಮಾಜಕ್ಕೆ ಹೊರೆಯಾಗದಂತೆ ಸಮಾಜದ ಸೇವೆಯನ್ನು ನಿಸ್ವಾರ್ಥ ಮನೋಧರ್ಮದಿಂದ ಮಾಡಬೇಕು ಎಂದು ನಿವೃತ್ತ ಅಧ್ಯಾಪಕ ಆನಂದ್ ವಾಡೇಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಂಡಿನಶಿವರದ ಸರ್ಕಾರಿ ಪ್ರೌಢಶಾಲೆಯಲ್ಲಿ 1998- 99ನೇ ಸಾಲಿನ ಹಳೆ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲರಾದ ಸುಧಾಮಣಿ ಮಾತನಾಡಿ, ಋಣ ತೀರಿಸಲಾಗದ್ದು ಯಾವುದಾದರೂ ಇದ್ದರೆ ಅದು ಗುರುವಿನ ಋಣ. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬಾಳಿದರೆ ಶಿಷ್ಯ ತನ್ನ ಗುರುವಿಗೆ ಕೊಡುವ ಗುರುದಕ್ಷಿಣೆ ಎಂದರು. ಇದೇ ವೇಳೆ ತಮಗೆ ವಿದ್ಯೆ ಕಲಿಸಿದ ಶಾರದಾ ಆನಂದ್ ವಾಡೇಕರ್, ಸೀತಮ್ಮ, ರಾಮಯ್ಯ, ಸಿ.ಕುಸುಮ, ರಂಗಪ್ಪ, ಕೋಮಲ ಅವರನ್ನು ಮತ್ತು ತಮ್ಮೊಂದಿಗೆ ವಿದ್ಯಾಭ್ಯಾಸ ಮಾಡಿದ ಸೈನಿಕ ದಿವಂಗತ ಬಸವೇಗೌಡರ ಪತ್ನಿ ಸವಿತಾರನ್ನು ಗೌರವಿಸಲಾಯಿತು.

ಶಿಕ್ಷಕರೊಂದಿಗೆ ಗ್ರಾಮ ದೇವತೆ ಹೊನ್ನಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವೇದಿಕೆಗೆ ಕರೆತರಲಾಯಿತು.

ಸಿದ್ದಗೌಡ, ಡಿ.ಎನ್.ಶಂಕರೇಗೌಡ, ಡಿ.ಟಿ.ವೆಂಕಟೇಶ್, ಜಿ.ಬಿ.ಗೌಡ, ಡಿ.ಕೆ.ತಿಮ್ಮೇಗೌಡ, ಡಿ.ಕೆ.ವೆಂಕಟೇಶ್, ಡಿ.ಬಿ.ಶಿವರಾಜು, ಡಿ.ಕೆ.ನಾಗರಾಜು, ಡಿ.ವಿ.ರಾಜಕುಮಾರ್, ಸಿದ್ದಗಂಗಯ್ಯ, ನಂ.ರಾಜು ಮುನಿಯೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-1639669542

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.