ಉಡುಪಿ: ‘ಇಡೀ ಶಾಲಾ ಶಿಕ್ಷಣ ವ್ಯವಸ್ಥೆ ಇಂದು ಪರೀಕ್ಷಾ ಕೇಂದ್ರಿತವಾಗಿದೆ. ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರು ಮಾಡುವ ಕೇಂದ್ರಗಳಾಗಿ ಶಾಲೆಗಳು ಪರಿವರ್ತನೆಯಾಗಿವೆ’ ಎಂದು ಶಿಕ್ಷಣ ಚಿಂತಕ ಎಫ್.ಸಿ.ಚೇಗರೆಡ್ಡಿ ಅಭಿಪ್ರಾಯಪಟ್ಟರು.

ಭಾರತ ಜ್ಞಾನ–ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎಂಜಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರೊ. ಮಾಧವ ಗಾಡ್ಗೀಳ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಎರಡನೇ ದಿನವಾದ ಭಾನುವಾರ ‘ಶಾಲಾ ಶಿಕ್ಷಣದ ಸದ್ಯದ ಬಿಕ್ಕಟ್ಟುಗಳು’ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಒಬ್ಬ ವ್ಯಕ್ತಿ ಆತ್ಮಗೌರವದಿಂದ ಬದುಕಲು ಶಿಕ್ಷಣ ಅಗತ್ಯ. ಆದರೆ ಇಂದು ಶಿಕ್ಷಣವು ನೌಕರಿ ಪಡೆಯಲು ಬೇಕಾದ ಸಾಧನವಾಗಿ ಮಾರ್ಪಾಡಾಗಿದೆ. ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದೇ ಶಿಕ್ಷಣದ ಉದ್ದೇಶವಾಗಿದೆ’ ಎಂದರು.

‘ಖಾಸಗಿ ಸಂಸ್ಥೆಗಳ ಅವೈಜ್ಞಾನಿಕ ವಾದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರವು ಶಿಕ್ಷಕರನ್ನು ಬಳಸಿಕೊಳ್ಳುತ್ತಿದೆ.ಬಿಆರ್ಸಿಗಳು ತರಬೇತಿ ಕೇಂದ್ರಗಳಾಗಿ ಉಳಿದಿಲ್ಲ. ಈಚೆಗೆ ಶಿಕ್ಷಕರ ತರಬೇತಿ ಕೇಂದ್ರಗಳೇ ಬಾಗಿಲು ಮುಚ್ಚುತ್ತಿವೆ. ಶಿಕ್ಷಕರನ್ನು ತಯಾರು ಮಾಡುವ ಕೇಂದ್ರಗಳೇ ತೀವ್ರ ನಿರ್ಲಕ್ಷ್ಯ ಕ್ಕೊಳಗಾಗಿವೆ’ ಎಂದು ಹೇಳಿದರು.

‘ಶಿಕ್ಷಕರಿಗೆ ತಂತ್ರಜ್ಞಾನ ಬಳಕೆಯಿಂದ ಒತ್ತಡ ಹೆಚ್ಚಾಗಿದೆ. ಕೆಪಿಎಸ್ ಶಾಲೆಗಳನ್ನು ಆರಂಭಿಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕೇಂದ್ರೀಕರಣವು ವಿಪರೀತವಾಗಿ ಶಾಲಾ ಶಿಕ್ಷಣವು ಬಡವಾಗುತ್ತಿದೆ. ಪಾಲಕರ ಸಭೆಯ ದಿನಾಂಕ ನಿಗದಿ ಕೂಡ ಎಸ್ಡಿಎಂಸಿ, ಶಿಕ್ಷಕರ ಕೈಯಲ್ಲಿಲ್ಲ. ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ’ ಎಂದರು.

ಸಮಾನ ಶಿಕ್ಷಣ ಹೋರಾಟಗಾರ ಬಿ.ಶ್ರೀಪಾದ್ ಭಟ್ ಮಾತನಾಡಿ, ‘ಇವತ್ತಿನ ಶಿಕ್ಷಣದ ಸಂದರ್ಭದಲ್ಲಿ ಒಳಗೊಳ್ಳದಿರುವುದು ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ. ಇವತ್ತಿಗೂ ಪೋಷಕರಿಗೆ ಶಿಕ್ಷಣ ನೀತಿಗಳ ಬಗ್ಗೆ ಗೊತ್ತಿರುವುದಿಲ್ಲ ಮತ್ತು ಅವರಿಗೆ ಅದರಲ್ಲಿ ಆಸಕ್ತಿ ಇರುವುದಿಲ್ಲ. ಪೋಷಕರನ್ನು ಒಳಗೊಳ್ಳ ದಿರುವುದು ದೊಡ್ಡ ಕೊರತೆ’ ಎಂದರು.

‘ಭಾರತದಲ್ಲಿ ಕಳೆದ 15 ವರ್ಷಗಳಿಂದ ಪ್ರತಿಯೊಂದು ಸಾರ್ವಜನಿಕ ನೀತಿಗಳು ಕೋರ್ಟ್ ಮೆಟ್ಟಿಲೇರುತ್ತವೆ. ಯಾವಾಗ ಸಾರ್ವಜನಿಕ ನೀತಿಗಳು ಕೋರ್ಟ್ ಮೆಟ್ಟಿಲೇರುತ್ತವೊ ಆಗ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ಹೋಗುತ್ತದೆ’ ಎಂದರು.

‘ಶಿಕ್ಷಣ ಸಾರ್ವತ್ರಿಕವಾಗಿದೆ ಎಂಬುದು ನಿಜ. ಆದರೆ ಎಷ್ಟರ ಮಟ್ಟಿಗೆ ಆಗಿದೆ, ಯಾರಿಗಾಗಿದೆ ಎಂಬ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ’ ಎಂದು ಹೇಳಿದರು.

‘ಇಂದು ತಂತ್ರಜ್ಞಾನ, ಬಹುಶಿಸ್ತೀಯ ಅಧ್ಯಯನಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಆದರೆ ಶಿಕ್ಷಣದಲ್ಲಿ ಪ್ರಾತಿನಿಧ್ಯ, ಸಬಲೀಕರಣಕ್ಕಾಗಿ ಇನ್ನೂ ಒದ್ದಾಡುತ್ತಿದ್ದೇವೆ. ಒಳಗೊಳ್ಳುವಿಕೆ ಸಾಧ್ಯವಾಗದಿರುವುದರಿಂದ ಹೀಗಾಗಿದೆ’ ಎಂದು ತಿಳಿಸಿದರು.

ಅಶೋಕ್ ಕುಂದಾಪುರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಶಂಕರ್ ಕೆಂಚನೂರು ಮಾತನಾಡಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-28-1361791534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.