ಉಡುಪಿ: ಮಣಿಪಾಲದ ಕೆಎಂಸಿಯ ಬೋಧನಾ ಆಸ್ಪತ್ರೆ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಯಕೃತ್ತು (ಲಿವರ್) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಮಣಿಪಾಲ ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಸುಧಾಕರ್ ಕಂಟಿಪುಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದೀರ್ಘಕಾಲದ ಯಕೃತ್ ಕಾಯಿಲೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಗೆ, ಮೃತ ದಾನಿ ಕಸಿ ಕಾರ್ಯಕ್ರಮದಡಿಯಲ್ಲಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವಿವರಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ, ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ಮತ್ತು ತಂಡ ಆರಂಭಿಕ ಮೌಲ್ಯಮಾಪನ ನಡೆಸಿದಾಗ, ಯಕೃತ್ ಕಸಿ ನಡೆಸುವುದರಿಂದ ಮಾತ್ರ ರೋಗಿ ಬದುಕುಳಿಯಲು ಸಾಧ್ಯ ಎಂಬುದು ಸ್ಪಷ್ಟವಾಯಿತು. ಬಳಿಕ ರೋಗಿಯನ್ನು ಎಚ್ಪಿಬಿ ಮತ್ತು ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್ಪ್ಲಾಂಟ್ ಸರ್ಜರಿಯ ಪ್ರಮುಖ ಸಲಹೆಗಾರ ಡಾ. ಜಯಂತ್ ರೆಡ್ಡಿ ನೇತೃತ್ವದ ಕಸಿ ತಂಡಕ್ಕೆ ಶಿಫಾರಸು ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಐಸಿಯು ತಂಡದೊಂದಿಗೆ ಡಾ.ಭರತ್ ಕುಮಾರ್ ಭಟ್ ಮತ್ತು ತಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ.ದೀಪ್ತಿ ರಾಮಚಂದ್ರ, ಡಾ.ಅವಿನಾಶ್ ಶೆಟ್ಟಿ, ಯಕೃತ್ತು ಕಸಿಗೆ ಒಳಗಾದ ರೋಗಿ, ಡಾ.ಶಿರನ್ ಶೆಟ್ಟಿ, ಡಾ.ಜಯಂತ್ ರೆಡ್ಡಿ, ಡಾ.ಭರತ್ ಭಟ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-28-730919738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.