ಹೆಬ್ರಿ: ಕೋಟೇಶ್ವರ ಕೆಪಿಎಸ್ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್ ಇದೇ 30ರಂದು ವೃತ್ತಿಯಿಂದ ನಿವೃತ್ತರಾಗಲಿದ್ದಾರೆ.

ಅವರನ್ನು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕವಾಗಿ ಬೀಳ್ಕೊಡಲು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಹಳೇ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ ಮತ್ತು ಪೋಷಕ ಸಮಿತಿ ಜಂಟಿಯಾಗಿ, ಚಂದ್ರ ನಾಯ್ಕ್ ಅವರ ಸೇವಾವಧಿಯ ಶಾಲೆಗಳ ಒಗ್ಗೂಡುವಿಕೆಯೊಂದಿಗೆ ಮೇ 9ರಂದು ಸಂಜೆ ಕೆಪಿಎಸ್ ಕೋಟೇಶ್ವರದ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಾವ್ ರಂಗಮಂಟಪದಲ್ಲಿ ‘ಬೆಳದಿಂಗಳು ಚಂದ್ರ ನಾಯ್ಕ್ ಎಚ್’ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿವೆ.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ಮಾಜಿ ಮಂಡಲ ಪ್ರಧಾನ ಪೆರ್ಡೂರು ಶಾಂತರಾಮ ಸೂಡ ಅಭಿನಂದನಾ ಮಾತನಾಡುವರು. ಕೆಪಿಎಸ್ ಕೋಟೇಶ್ವರದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ಕೋಟೇಶ್ವರ ಶ್ರೀಧರ ವಿಠ್ಠಲ ಕಾಮತ್, ಕೋಟೇಶ್ವರ ಡಾ. ಎನ್.ಆರ್. ಆಚಾರ್ಯ ಮೆಮೊರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಭಾಸ್ಕರ ಆಚಾರ್ಯ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಕೊಳ್ಕೆಬೈಲು ರವೀಂದ್ರನಾಥ ಶೆಟ್ಟಿ, ಉದ್ಯಮಿ ಶಂಕರ ಕಾಮತ್ ಕೋಟೇಶ್ವರ, ಕೆಪಿಎಸ್ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗೋಪಾಲ ಆಚಾರ್ಯ ಭಾಗವಹಿಸುವರು.

ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಹೆರಪಳ್ಳಿಯ ಚಂದ್ರ ನಾಯ್ಕ್ 1989–90ರಲ್ಲಿ ಮೂಡುಬಿದಿರೆಯ ಅಶ್ವತ್ತಪುರ ಶ್ರೀವಾಣಿ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದರು. ನಂತರ ಸರ್ಕಾರಿ ಶಾಲೆಗೆ ನೇಮಕಗೊಂಡು, ಉಡುಪಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 35 ವರ್ಷ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-28-789089454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.