ಉಡುಪಿ: ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬಹಳ ಪ್ರತಿಭಾನ್ವಿತರಾಗಿತ್ತಾರೆ. ಹಾಗಾಗಿ ಶಿಕ್ಷಕರು ಪ್ರತಿವರ್ಷ ವೃತ್ತಿ ಪ್ರವೃತ್ತಿಯಲ್ಲಿ ಕ್ರಿಯಾಶೀಲರಾಗಿ ಮಕ್ಕಳ ಮನೋಭಾವವನ್ನು ಅರಿತು ಬೋಧಿಸಬೇಕಾಗುತ್ತದೆ ಎಂದು ಮಣಿಪಾಲದ ಮಾಹೆಯ ಔದ್ಯೋಗಿಕ ಪ್ರಕ್ರಿಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಾಲಿನಿ ಕ್ವಾಡ್ರಸ್ ಹೇಳಿದರು.

ಸಂತೆಕಟ್ಟೆಯ ಮೌಂಟ್ ರೋಸರಿ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಹಳೆಯ ಉದಾಹರಣೆಗಳ ಬದಲಿಗೆ ಪ್ರಚಲಿತ ವಿಷಯಗಳ ಉದಾಹರಣೆ ನೀಡಿ ಪಾಠಮಾಡಬೇಕು. ಯಾಕೆಂದರೆ ವಿದ್ಯಾರ್ಥಿಗಳು ಲವಲವಿಕೆ ಪಾಠವನ್ನು ಇಷ್ಟಪಡುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಸ್ಥೆ ಆನ್ಸಿಲ್ಲಾ ಡಿಮೆಲ್ಲೊ ಮಾತನಾಡಿ, ಶಿಕ್ಷಕರು ಸದಾ ವಿದ್ಯಾರ್ಥಿಗಳಂತೆ ತಮ್ಮ ವಿಷಯದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಬೇಕು ಎಂದು ಹೇಳಿದರು.

ಶಿಕ್ಷಕಿ ಅಮೃತಾ ಸ್ವಾಗತಿಸಿದರು. ಮಾರ್ತ ಅತಿಥಿಗಳ ಪರಿಚಯ ಮಾಡಿಕೊಟ್ಟರು. ದಿವ್ಯಾಜೋತಿ ನಿರೂಪಿಸಿದರು. ಸಾರಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-28-1770785280

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.