ಉಡುಪಿ: ಹೊಸತನಕ್ಕೆ ಒಗ್ಗಿಕೊಳ್ಳುತ್ತಾ ಹೊಸ ಕಲಿಕೆಯೊಂದಿಗೆ ಕಾಲದ ಸವಾಲುಗಳನ್ನು ಎದುರಿಸಲು ಬದಲಾವಣೆಗೆ ಒಗ್ಗಿಕೊಳ್ಳದೇ ಇದ್ದರೆ ಹೋರಾಡಿ ಗೆಲ್ಲುವ ಅವಕಾಶಗಳಿಂದ ಯುವಸಮುದಾಯ ವಂಚಿತವಾಗುವ ಅಪಾಯವಿದೆ ಎಂದು ನಿವೃತ್ತ ಪ್ರಾಂಶು ಪಾಲ ರಾಧಾಕೃಷ್ಣ ಶೆಟ್ಟಿ ಕೆ. ಹೇಳಿದರು.

ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಅವಮಾನ, ಸವಾಲುಗಳನ್ನು ಒಡ್ಡುವ ಬದುಕಿನ ಸಂಕಟಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದವರಿಗೆ ಸನ್ಮಾನವು ತಾನಾಗಿಯೇ ಒದಗಿ ಬರುತ್ತದೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಸೌಮ್ಯಲತಾ ಪಿ. ವಾರ್ಷಿಕ ವರದಿ ವಾಚಿಸಿದರು. ಪ್ರಾಂಶುಪಾಲ ಜಯಪ್ರಕಾಶ್ ಶೆಟ್ಟಿ ಎಚ್., ವಸಂತ ಶೆಟ್ಟಿ ಚೆನ್ನಿಬೆಟ್ಟು, ಉಮೇಶ್ ಶೆಟ್ಟಿ, ಐಕ್ಯುಎಸಿ ಸಂಚಾಲಕ ಲಿತಿನ್ ಬಿ.ಎಂ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಈರಬಸು, ಉಪಾಧ್ಯಕ್ಷೆ ವೈಷ್ಣವಿ ಉಪಸ್ಥಿತರಿದ್ದರು. ಡಿ.ಎಸ್. ದೊಡ್ಡಮನಿ ಸ್ವಾಗತಿಸಿದರು. ಪ್ರಣೀತ ವಂದಿಸಿದರು. ನಿಶ್ಚಿತ ಎಸ್.ಹೋಬಳಿದಾರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-28-2122363713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.