ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಪದವಿ ಕೋರ್ಸ್‌: ಕರಡು ಅಂತಿಮಗೊಳಿಸಿದ ಯುಜಿಸಿ

ಭಾರತೀಯ, ವಿದೇಶಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ
Last Updated 21 ಫೆಬ್ರುವರಿ 2021, 5:34 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಹಾಗೂ ವಿದೇಶ ಮೂಲದ ಉನ್ನತ ಶಿಕ್ಷಣ ಸಂಸ್ಥೆಗಳು ದ್ವಿಪದವಿ ಅಥವಾ ಜಂಟಿ ಪದವಿಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ ಕರಡನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಂತಿಮಗೊಳಿಸಿದೆ.

ಈ ಕರಡನ್ನು ಸಾರ್ವಜನಿಕರೂ ಪರಿಶೀಲಿಸಿ, ತಮ್ಮ ಅಭಿಪ್ರಾಯ, ಪ್ರತಿಕ್ರಿಯೆ ಸಲ್ಲಿಸಲು ಅನುಕೂಲವಾಗಲು ಯುಜಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸಾರ್ವಜನಿಕ ವಲಯದಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳನ್ನು ಕ್ರೋಡೀಕರಿಸಿದ ನಂತರ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಯುಜಿಸಿ ಮೂಲಗಳು ಹೇಳಿವೆ.

ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ವಿದೇಶಿ ಸಂಸ್ಥೆಗಳ ಸಹಯೋಗದಲ್ಲಿ ದ್ವಿಪದವಿ ಕೋರ್ಸ್‌ಗಳನ್ನು ಆರಂಭಿಸಬಹುದು. ಪರಸ್ಪರರ ಪದವಿಕೋರ್ಸ್‌ಗಳಿಗೆ ಮಾನ್ಯತೆಯನ್ನು ನೀಡಲು ಈ ಕರಡು ಅವಕಾಶ ಒದಗಿಸುತ್ತದೆ.

ಆದರೆ, ಆನ್‌ಲೈನ್‌, ದೂರಶಿಕ್ಷಣ ಪದ್ಧತಿಯಡಿ ನೀಡಲಾಗುವ ಕೋರ್ಸ್‌ಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಯುಜಿಸಿ ಮೂಲಗಳು ಸ್ಪಷ್ಪಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT