ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಮಲೈ ದೂರ ಶಿಕ್ಷಣ ಕೋರ್ಸುಗಳಿಗೆ ಸೇರಬೇಡಿ: ವಿದ್ಯಾರ್ಥಿಗಳಿಗೆ UGC ಎಚ್ಚರಿಕೆ

ಕೋರ್ಸುಗಳಿಗೆ ಅನುಮೋದನೆ ಪಡೆಯದ ವಿಶ್ವವಿದ್ಯಾಲಯ
Last Updated 3 ಏಪ್ರಿಲ್ 2022, 14:30 IST
ಅಕ್ಷರ ಗಾತ್ರ

ನವದೆಹಲಿ: ದೂರಶಿಕ್ಷಣ ಕೋರ್ಸುಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅನುಮೋದನೆ ಪಡೆಯದ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ದೂರಶಿಕ್ಷಣದ ಯಾವುದೇ ಕೋರ್ಸುಗಳಿಗೆ ಸೇರಬೇಡಿ ಎಂದು ಆಯೋಗವು ಮತ್ತೊಮ್ಮೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

ತನ್ನಲ್ಲಿನ ದೂರಶಿಕ್ಷಣ ಮಾದರಿಯ ಕೋರ್ಸುಗಳಿಗೆ ಯುಜಿಸಿ ಅನುಮೋದನೆಯ ಯಾವುದೇ ಅವಶ್ಯಕತೆ ಇಲ್ಲ ಎಂದು ವಿಶ್ವವಿದ್ಯಾಲಯ ಹೇಳುತ್ತಿದೆ. ಆದರೆ ಯುಜಿಸಿ ಅನುಮೋದನೆ ಇಲ್ಲದೆ ಪಡೆಯುವ ಕೋರ್ಸುಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಅದು ಪುನರುಚ್ಚರಿಸಿದೆ.

‘ಅಣ್ಣಾಮಲೈ ವಿಶ್ವವಿದ್ಯಾಲಯವು ಯುಜಿಸಿಯು ಮುಕ್ತ ಮತ್ತು ದೂರಶಿಕ್ಷಣದ 2017 ಮತ್ತು 2020ರ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ಎಲ್ಲಾ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಯಾವುದೇ ಅನುಮೋದನೆಯಿಲ್ಲದೆ ದೂರ ಶಿಕ್ಷಣ ಕೋರ್ಸುಗಳನ್ನು ನೀಡುತ್ತಿದೆ. ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದರು.

ನಿಯಮಗಳ ಪ್ರಕಾರ, ಆಯೋಗ ಮಾನ್ಯತೆ ನೀಡದ ಹೊರತುಯಾವುದೇ ಉನ್ನತ ಶಿಕ್ಷಣ ಸಂಸ್ಥೆಯು ದೂರ ಶಿಕ್ಷಣದ ಕೋರ್ಸುಗಳನ್ನು ನೀಡಲು ಸಾಧ್ಯವಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಕೋರ್ಸುಗಳ ಪ್ರವೇಶಾತಿ ನೀಡುವಂತಿಲ್ಲ.

‘ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ 2014–15ರ ಶೈಕ್ಷಣಿಕ ವರ್ಷದವರೆಗೆ ಮಾತ್ರ ದೂರಶಿಕ್ಷಣಕ್ಕೆ ಮಾನ್ಯತೆ ನೀಡಲಾಗಿತ್ತು. ನಂತರದಲ್ಲಿ ಈ ಹಂತದಲ್ಲಿ ಯಾವುದೇ ಕೋರ್ಸುಗಳನ್ನು ನೀಡಲು ಯುಜಿಸಿ ಮಾನ್ಯತೆ ನೀಡಿಲ್ಲ. ಈ ಕೋರ್ಸುಗಳನ್ನು ಪಡೆದ ವಿದ್ಯಾರ್ಥಿಗಳು ಎದುರಿಸುವ ಯಾವುದೇ ಸಮಸ್ಯೆಗಳಿಗೆ ವಿಶ್ವವಿದ್ಯಾಲಯ ಜವಾಬ್ದಾರಿಯಾಗಿದೆ’ ಎಂದು ರಜನೀಶ್‌ ಹೇಳಿದರು.

ಈ ಸಂಬಂಧ ಅಣ್ಣಾಮಲೈ ವಿಶ್ವವಿದ್ಯಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT