ಉಳ್ಳಾಲ: ಶಾಲೆ ಎಂದರೆ ರಾಜಕೀಯ ಜಾಗೃತಿ, ಶೈಕ್ಷಣಿಕ ಮೇಲುಗೈ, ಕ್ರೀಡಾ ಚಟುವಟಿಕೆಯನ್ನು ಸಮಾನವಾಗಿ ಬೆಳೆಸುವ ಕೇಂದ್ರವಾಗಿರಬೇಕು. ಅಂಥ ಸಮಗ್ರ ಅಭಿವೃದ್ಧಿಗೆ ವೇದಿಕೆಯಾದ ತೊಕ್ಕೊಟ್ಟು ವ್ಯಾಯಾಮ ಶಾಲೆಯ 75ನೇ ಸಂವತ್ಸರದ ಸಂಭ್ರಮಾಚರಣೆ ಉತ್ತಮವಾಗಿ ನಡೆದಿದೆ ಎಂದು ಉಳ್ಳಾಲ ಉಳಿಯದ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದರು.

ತೊಕ್ಕೊಟ್ಟು ಭಟ್ನಗರದ ಜೈವೀರ ಮಾರುತಿ ವ್ಯಾಯಾಮ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಹನುಮಾಮೃತ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ತೊಕ್ಕೊಟ್ಟು ವ್ಯಾಯಾಮ ಶಾಲೆ ಎಂದರೆ ಎಲ್ಲರಿಗೂ ಪರಿಚಿತವಾದ, ವಿಶ್ವಾಸಾರ್ಹ ಸಂಸ್ಥೆ. ಶಾಲೆಯ ಅಚ್ಚುಕಟ್ಟಾದ ವ್ಯವಸ್ಥೆ, ಶಿಸ್ತು ಮತ್ತು ಶ್ರದ್ಧೆಯ ಖ್ಯಾತಿಯನ್ನು ಇನ್ನಷ್ಟು ಎತ್ತಿಹಿಡಿದಿವೆ. ರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಅನೇಕ ವಿದ್ಯಾರ್ಥಿಗಳು ಈ ಸಂಸ್ಥೆಯ ಹೆಮ್ಮೆಯ ಗುರುತುಗಳಾಗಿದ್ದಾರೆ ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉಳ್ಳಾಲ ಭಗವತಿ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವರ್, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ದ.ಕ.ಜಿಲ್ಲಾ ಅಮೆಚೂರ್ ಕುಸ್ತಿ ಫೆಡರೇಷನ್ ಅಧ್ಯಕ್ಷ ದಿಲ್ರಾಜ್ ಆಳ್ವ, ಚೀರುಂಬ ಭಗವತಿ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್, ಬಂಡಿಕೊಟ್ಯ ಪುನ್ಕೆದಡಿ ಕೋರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಉಳ್ಳಾಲ್, ಕೊಲ್ಯ ಮಠ, ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಸ್ತ್ರಗ್ರೂಪ್ನ ಲಾಂಚುಲಾಲ್ ಕೆ.ಎಸ್., ವಕೀಲ ರಾಮಚಂದ್ರ ಬಿ.ತೊಕ್ಕೊಟ್ಟು, ಅನಿಲ್ ದಾಸ್, ಉದ್ಯಮಿ ಜಯಂತ್ ಕೊಂಡಾಣ, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸುಜಿತ್ ಪ್ರತಾಪ್, ವ್ಯಾಯಾಮ ಶಾಲಾ ಶಿಕ್ಷಕ ಜಯಾನಂದ ಅಂಚನ್ ಭಾಗವಹಿಸಿದ್ದರು.

ಶಾಲೆಯ ಸ್ಥಾಪಕ ಸದಸ್ಯರಾದ ಸುಂದರ್ ಅಮೀನ್, ಭಾಸ್ಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರೋಹಿತ್ ಉಳ್ಳಾಲ್ ಸ್ವಾಗತಿಸಿದರು. ಜೈವೀರ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ್ ಗಟ್ಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-29-496042555

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.