ಉಳ್ಳಾಲ: ‘ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿ, ಆಯ್ಕೆಯ ಪ್ರಕಾರ ಕಲಿಯುವ ಸ್ವಾತಂತ್ರ್ಯ ನೀಡಿದೆ. ಕಾಲೇಜುಗಳು ಪದವಿ ನೀಡುವ ಕೇಂದ್ರಗಳಾಗದೆ, ಶಿಕ್ಷಣದ ನೈಜ ಉದ್ದೇಶ, ಆಶಯವನ್ನರಿತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು. ಶಿಕ್ಷಕರ ಹೊಣೆಗಾರಿಕೆ, ಮಾರ್ಗದರ್ಶನವೇ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುತ್ತದೆ’ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಎಸ್.ಎಸ್.ಇಂಜಗನೇರಿ ಹೇಳೀದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದ ಎಂಡ್ಯುರೆನ್ಸ್ ಝೋನ್ ಸಭಾಂಗಣದಲ್ಲಿ ಆಯೋಜಿಸಲಾದ ‘ಪ್ರಾಜೆಕ್ಟ್ ಸಂಕಲ್ಪ್: ಕೋಡ್ ಫರ್ ಚೇಂಜ್’ 24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಗಿರಿಧರ್ ಉಪಾಧ್ಯಾಯ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಸಾಕಾರವಾಗಲು ಸಂಶೋಧನೆ ಆಧಾರಿತ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯುವ ಸಾಮರ್ಥ್ಯ ಬೆಳೆಸುವ ಸಂಶೋಧನಾ ಚಟುವಟಿಕೆಗಳು ರಾಷ್ಟ್ರ ನಿರ್ಮಾಣಕ್ಕೆ ಬಲ ತುಂಬುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಪರಿಗಣಿತ ವಿವಿ ಸಹ ಕುಲಾಧಿಪತಿ ಡಾ.ಎಂ. ವಿಜಯ ಕುಮಾರ್ ಮಾತನಾಡಿ, ಸಂಶೋಧನೆ ಪ್ರಕಟಣೆಗೆ ಸೀಮಿತವಾಗದೆ ಅದರ ಫಲಿತಾಂಶಗಳು ಸಮಾಜಕ್ಕೆ ಉಪಯುಕ್ತವಾಗಬೇಕು. ಇಂದು ಸಂಶೋಧನೆ, ನವೀನತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಸುಮಾರು ₹2 ಕೋಟಿವರೆಗೆ ಅನುದಾನ, ಪ್ರೋತ್ಸಾಹಧನ ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತಿದೆ. ದೇಶದಲ್ಲಿ ಆಯ್ಕೆಯಾದ 7 ಇನ್ಕ್ಯುಬೇಟರ್ ಸಂಸ್ಥೆಗಳಲ್ಲಿ ಯೆನೆಪೋಯ ಫೌಂಡೇಷನ್ ಕೂಡ ಒಂದು ಎಂದರು.

ಎನ್.ಐ.ಟಿ.ಕೆ ಸುರತ್ಕಲ್ ಸಂಶೋಧನಾ ಮತ್ತು ಆವಿಷ್ಕಾರ ವಿಭಾಗಗಳ ಡೀನ್ ಪ್ರೊ.ಉದಯ್ ಭಟ್ ಮಾತನಾಡಿ, ಭಾರತದತ್ತ ಇಂದು ವಿಶ್ವ ಗೌರವದಿಂದ ನೋಡುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮಹತ್ತರವಾಗಿದೆ. ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ಸಾಮರ್ಥ್ಯದಿಂದ ಭಾರತ ಜಾಗತಿಕ ಸರಬರಾಜು ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡುತ್ತಿದ್ದು, ಜನರಿಗೆ ಅನೇಕ ಸಬ್ಸಿಡಿ, ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು.

ಕುಲಸಚಿವೆ ಡಾ.ಅಶ್ವಿನಿ ದತ್ ಆರ್. ಭಾಗವಹಿಸಿದ್ದರು. ಯೆನೆಪೋಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡಾ.ರೇಖಾ ಪಿ.ಡಿ. ಸ್ವಾಗತಿಸಿದರು. ವಿಸ್ತರಣಾ ಮತ್ತು ಜನಸಂಪರ್ಕ ನಿರ್ದೇಶಕಿ ಡಾ.ಅಶ್ವಿನಿ ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮ ಪ್ರೋತ್ಸಾಹ ಮತ್ತು ತಂತ್ರಜ್ಞಾನ ಕೇಂದ್ರದ ಸಿಇಒ ಅಸೀಂ ಸೈಯದ್ ಶೀರಾಝ್ ವಂದಿಸಿದರು.

ವಿವಿಧ ರಾಜ್ಯಗಳ 30 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರತಿ ತಂಡದಲ್ಲಿ 3ರಿಂದ 5 ಸದಸ್ಯರಿದ್ದಾರೆ. ಸ್ಪರ್ಧೆಗೆ ಒಟ್ಟು ₹1 ಲಕ್ಷ ಬಹುಮಾನ ಘೋಷಿಸಲಾಗಿದೆ.

ಆಯ್ಕೆಯಾಗುವ ಅತ್ಯುತ್ತಮ 10 ತಂಡಗಳಿಗೆ ಯೆನೆಪೋಯ ಇನೋವೇಷನ್ ಸೆಂಟರ್ ವತಿಯಿಂದ ಮಾರ್ಗದರ್ಶನ, ಬೆಂಬಲ ಒದಗಿಸಲಾಗುತ್ತದೆ. ಆಯ್ಕೆಯಾದ ಆಲೋಚನೆಗಳನ್ನು ಮುಂದಿನ ಹಂತದಲ್ಲಿ ಅಭಿವೃದ್ಧಿಪಡಿಸಿ, ಅನುಷ್ಠಾನ, ವಿಸ್ತರಣೆಗೆ ಅಗತ್ಯವಾದ ಹಣಕಾಸು, ತಾಂತ್ರಿಕ ನೆರವು ನೀಡಲಾಗುತ್ತದೆ ಎಂದು ಯೆನೆಪೋಯ ವಿಸ್ತರಣಾ ಮತ್ತು ಜನಸಂಪರ್ಕ ಘಟಕದ ನಿರ್ದೇಶಕ ಅಶ್ವಿನಿ ಎಸ್. ಶೆಟ್ಟಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-404806738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.