ಸಾಧನೆಯ ಛಲ ಇರುವವರಿಗೆ ಯಾವುದೇ ಸವಾಲುಗಳು ಅಡ್ಡಿಯಾಗವು ಎಂಬುದಕ್ಕೆ 2025ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 946ನೇ ರ್ಯಾಂಕ್ ಪಡೆದ ಸಂಜಯ್ ದಹಾರಿಯಾ ಅವರ ಕಥೆಯೇ ಸ್ಫೂರ್ತಿ.

ಛತ್ತೀಸಗಢದ ಮಹಾಸ್ಮುಂಡ್ ಜಿಲ್ಲೆಯ ಬೆಲ್ತುಕರಿ ಗ್ರಾಮದವರಾದ ಸಂಜಯ್, ರೈತ ಕುಟುಂಬದ ಹಿನ್ನೆಲೆಯವರು. ಪ್ರತಿಭಾವಂತರಾದ ಸಂಜಯ್, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ಯುವಕ. ರಾಯಪುರದಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶ ಗಿಟ್ಟಿಸಿಕೊಂಡ ಇವರ ಬದುಕಿನ ದಿಕ್ಕು ಬದಲಾಗಿದ್ದು, ಐಎಎಸ್ ಅಧಿಕಾರಿಯೊಬ್ಬರನ್ನು ಭೇಟಿಯಾದ ಕ್ಷಣದಿಂದ. ತಾನೂ ಅವರಂತೆಯೇ ಒಬ್ಬ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡವರು ಸಂಜಯ್.

ಮಹಾಸಮುಂಡ್ನ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಸಂಜಯ್ ಬ್ಯಾಂಕ್ನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಆದರೆ ಅವರ ಐಎಎಸ್ ಕನಸು ಹಾಗೇ ಉಳಿಯಿತು. ಆ ನಿಟ್ಟಿನಲ್ಲೇ ಅವರ ಚಿಂತನೆಗಳೂ ಮುಂದುವರಿದವು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. 2012ರಲ್ಲಿ ಸಂಜಯ್ ಅವರಲ್ಲಿ ಸಲೈವರಿ ಗ್ರಂಥಿಯ ಕ್ಯಾನ್ಸರ್ ಪತ್ತೆಯಾಯಿತು.
.ಯುಪಿಎಸ್ಸಿ 2025ರ ರಿಸಲ್ಟ್: ರಾಜಸ್ಥಾನದ ಅನುಜ್ ಅಗ್ನಿಹೋತ್ರಿಗೆ ಮೊದಲ ರ್ಯಾಂಕ್.ಯುಪಿಎಸ್ಸಿ ಸಿವಿಲ್ ಸರ್ವಿಸ್ ರಿಸಲ್ಟ್: ಚಿಕ್ಕೋಡಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ.
ಆಗ ಅವರ ವಯಸ್ಸು 23. ಧೃತಿಗೆಡದ ಸಂಜಯ್ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಯಿತು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ 28 ರೇಡಿಯೇಷನ್ಗಳನ್ನು ಅವರಿಗೆ ನೀಡಲಾಯಿತು. ಒಂದು ಹಂತದಲ್ಲಿ ಮುಖದ ಬಲಭಾಗದ ನರವ್ಯೂಹದ ಸಮಸ್ಯೆ ಎದುರಾಗಿ ಭಾಗಶಃ ಅಂಗವೈಕಲ್ಯಕ್ಕೂ ತುತ್ತಾದರು.

ಇಷ್ಟಾದರೂ ಮನಸಿನ ಆಳದಲ್ಲಿ ಮೊಳಕೆಯೊಡೆದಿದ್ದ ಐಎಎಸ್ ಕನಸು ಮತ್ತು ತಮ್ಮ ದೃಢ ನಿರ್ಧಾರದಿಂದ ಸಂಜಯ್ ಕದಲಲಿಲ್ಲ. ಕ್ಯಾನ್ಸರ್ ಅವರ ಮಹದ್ದುದ್ದೇಶವನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಚಿಕಿತ್ಸೆಯ ವೆಚ್ಚ ಭರಿಸಲು ಅವರು ಬ್ಯಾಂಕ್ ಮತ್ತು ಪೋಸ್ಟ್ ಕಚೇರಿಯಲ್ಲಿ ನೌಕರಿ ಪಡೆದು ದುಡಿಮೆಯನ್ನು ಮುಂದುವರಿಸಿದರು. ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು. ಸಿಕ್ಕ ನೌಕರಿಯನ್ನು ತೊರೆದು ಯುಪಿಎಸ್ಸಿ ಕಡೆ ಗಮನ ಕೇಂದ್ರೀಕರಿಸಿದರು.

2022ರಲ್ಲಿ ಅವರು ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಎದುರಿಸಿದರು. ಆದರೆ ಅವರ ಪ್ರಯತ್ನ ವಿಫಲವಾದವು. ಆದರೆ ಛಲ ಬಿಡದ ಸಂಜಯ್ ಸತತ ಪ್ರಯತ್ನ ನಡೆಸಿದರು. ಮೂರನೇ ಪ್ರಯತ್ನದಲ್ಲಿ 2025ರಲ್ಲಿ ಅವರು 946ನೇ ರ್ಯಾಂಕ್ ಪಡೆದು ನಾಗರಿಕ ಸೇವೆಗೆ ಆಯ್ಕೆಯಾದರು.

ಭಾರತೀಯ ಕಂದಾಯ ಇಲಾಖೆಯಲ್ಲಿ ಹುದ್ದೆ ಸಿಗುವ ನಿರೀಕ್ಷೆಯಲ್ಲಿರುವ ಸಂಜಯ್ ದಹಾರಿಯಾ ಅವರು ಫಲಿತಾಂಶ ಪ್ರಕಟಗೊಂಡಾಗ ಪ್ರತಿಕ್ರಿಯಿಸಿ ‘ದೇಶಕ್ಕೆ ಸೇವೆ ಮಾಡುವುದೇ ನನ್ನ ಗುರಿ’ ಎಂದಿದ್ದಾರೆ.

ಅನಾರೋಗ್ಯ, ಆರ್ಥಿಕ ಸಂಕಷ್ಟ ಮತ್ತು ವಿಫಲ ಪ್ರಯತ್ನಗಳು ಎದುರಾದರೂ ದೃಢಸಂಕಲ್ಪ ಮತ್ತು ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಸಂಜಯ್ ದಹಾರಿಯಾ ಅವರ ಸಾಧನೆಯ ಹಾದಿಯೇ ಸ್ಫೂರ್ತಿ.
.UPSC: ಐಎಎಸ್ ಬಾಬಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ರಾಜ್ಯದ 24 ಮಂದಿಗೆ ರ್ಯಾಂಕ್.UPSC ವಿವಾದ: ಬೇರೆ ಬೇರೆ ರಾಜ್ಯಗಳ ಒಂದೇ ಹೆಸರಿನ ಇಬ್ಬರಿಗೆ 301ನೇ ರ್ಯಾಂಕ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.