ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಚಿರೇಕಲ್ಲು ಗುಡ್ಡಗಳಲ್ಲಿ ಸಂಶೋಧನೆ ವೇಳೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು (ಎಎಸ್ಐ) ಮಧ್ಯ ಶಿಲಾಯುಗದಲ್ಲಿನ ಹಲವು ಕುರುಹುಗಳನ್ನು ಗುರುತಿಸಿದೆ.

‘ಕಾರವಾರದಿಂದ ಭಟ್ಕಳದವರೆಗೆ ಚಿರೇಕಲ್ಲು ಬೆಟ್ಟ ಕೇಂದ್ರೀಕರಿಸಿಕೊಂಡು ಪರಿಶೀಲನೆ ನಡೆಯಿತು. ಶಿಲಾಯುಗದಲ್ಲಿ ಇಲ್ಲಿ ಚಟುವಟಿಕೆಗಳು ನಡೆದಿದ್ದವು ಎಂಬುದು ದೃಢಪಟ್ಟಿದೆ’ ಎಂದು ಎಎಸ್ಐ ಹೇಳಿದೆ. ‘30 ರಿಂದ 120 ಮೀಟರ್ ಎತ್ತರದ ಚಿರೇಕಲ್ಲಿನ ಬೆಟ್ಟಗಳಲ್ಲಿ ಸಂಶೋಧನೆ ನಡೆಸಲಾಗಿದೆ. ಅಂತಹ ಪ್ರದೇಶಗಳಲ್ಲಿ ಮಧ್ಯ ಮತ್ತು ನವ ಶಿಲಾಯುಗದ ಸಾಂಸ್ಕೃತಿಕ ಅವಶೇಷಗಳು ಕಂಡುಬಂದಿವೆ. ಮಧ್ಯ ಶಿಲಾಯುಗದ ಹಲವು ರಚನೆಗಳು ಮತ್ತು ಕಲ್ಲಿನ ಆಯುಧಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ತಿಳಿಸಿದೆ.

‘ಮಧ್ಯ ಶಿಲಾಯುಗದ ರಚನೆಗಳು, ಕುಮಟಾದ ಹರನೀರ, ಮಿರ್ಜಾನ್ ಬಳಿ ಉಪಕರಣಗಳು ಪತ್ತೆಯಾಗಿವೆ. ಕುಮಟಾ ಮತ್ತು ನೀಲಕೊಂಡದ ಬಳಿ ನವಶಿಲಾಯುಗದ ಕುರುಹುಗಳು ಸಿಕ್ಕಿವೆ’ ಎಂದು ಸಂಸ್ಥೆ ಹೇಳಿದೆ. ‘ಕರಾವಳಿ ಭಾಗದಲ್ಲಿ ಸಿಕ್ಕ ಈ ಕುರುಹುಗಳು 20 ಸಾವಿರ ವರ್ಷಕ್ಕೂ ಹಿಂದೆ ಮಾನವ ಚಟುವಟಿಕೆಗಳು ಇಲ್ಲಿ ಇದ್ದವು ಎಂದು ದೃಢ ಪಡಿಸುತ್ತವೆ’ ಎಂದು ಇತಿಹಾಸಕಾರ ಲಕ್ಷ್ಮೀಶ ಸೋಂದಾ ವಿಶ್ಲೇಷಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-51-1036698788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.