ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಶಸ್ತ್ರಚಿಕಿತ್ಸಕರು, ಬಡವರ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದ ದಿ.ಡಾ.ವಿಶ್ವನಾಥ್ ಜಾಜು ರೇವಣಕರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳನ್ನು ನೀಡಬೇಕೆಂದು ಆಗ್ರಹಿಸಿ ಡಾ.ಅಂಬೇಡ್ಕರ್ ಶಕ್ತಿ ಸಂಘದಿಂದ ಮುಖ್ಯಮಂತ್ರಿಗೆ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಶಿರಸಿ ತಾಲ್ಲೂಕಿನ ಕೋಟೆಗಲ್ಲಿಯ ನಿವಾಸಿಯಾಗಿದ್ದ ಡಾ.ರೇವಣಕರ್ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಇವರು, ಸಾಲ್ಕಣಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರವಾರ ಮತ್ತು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರವೂ ಬಡವರಿಗೆ ಚಿಕಿತ್ಸೆ ಉಚಿತ ನೀಡುವ ಮೂಲಕ ಶಿರಸಿ ಭಾಗದಲ್ಲಿ ಮನೆಮಾತಾಗಿದ್ದರು.

ಡಾ. ವಿಶ್ವನಾಥ್ ರೇವಣಕರ್ ಅವರು ವೈದ್ಯಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ರಾಜ್ಯ ವೈದ್ಯಕೀಯ ಸೇವಾ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ನಾಯ್ಕ, ಶಸ್ತ್ರ ಚಿಕಿತ್ಸಕ ಡಾ.ಲೋಕೇಶ್ ವೈ.ಆರ್., ಸಂಘದ ಅಧ್ಯಕ್ಷ ನಂದನ ಪಿ. ಬೋರ್ಕರ್, ಪ್ರಮುಖರಾದ ಚಂದ್ರಶೇಖರ ಜಿ. ಕಾನಡೆ, ಎಚ್.ಕೆ. ಶಿವಾನಂದ, ಕಿರಣ ಕಾನಡೆ, ಗಜಾನನ ಜೋಗಳೇಕರ, ರಮೇಶ ಛಲವಾದಿ, ಕಮಲಾಕರ ಜೋಗಳೇಕರ, ವಿನಾಯಕ ಅಗ್ಗೇರಿ, ಲಕ್ಷ್ಮಣ ಬೋರಕರ್ ದ್ಯಾವ ಚಲವಾದಿ, ರಮೇಶ್ ಬೇಡರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-20-1866514794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.