ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ

Last Updated 6 ನವೆಂಬರ್ 2022, 20:30 IST
ಅಕ್ಷರ ಗಾತ್ರ

ಲೋರೆಯಾಲ್ ಎಲ್‌ಇ‌ಎಡಿ 2022 (L’Oréal LEAD 2022)

ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಲೊರೆಯಾಲ್‌ ಇಂಡಿಯಾ ಸಂಸ್ಥೆ (L’Oréal India) ಲೊರೆಯಾಲ್ ಎಲ್‌ಇ‌ಎಡಿ 2022 ಸ್ಕಾಲರ್‌ಷಿಪ್‌ ಕಾರ್ಯಕ್ರಮವನ್ನು ರೂಪಿಸಿದೆ.

ಅರ್ಹತೆ

l ಭಾರತದಲ್ಲಿರುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿಯ ಅಂತಿಮ ಅಥವಾ ಪೂರ್ವ ಅಂತಿಮ ವರ್ಷದ ತರಗತಿಯಲ್ಲಿ ಓದುತ್ತಿರಬೇಕು

l 18 ರಿಂದ 30 ವರ್ಷ ವಯಸ್ಸಿನೊಳಗಿರಬೇಕು

l ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ವೆಬ್‌ಲಿಂಕ್‌ಗೆ ಭೇಟಿ ಕೊಡಿ.

ಆರ್ಥಿಕ ನೆರವು

l ಲೋರೆಯಾಲ್ ಇಂಡಿಯಾದ ಉನ್ನತ ನಿರ್ವಹಣಾ ವೃತ್ತಿಪರರು ನಡೆಸಲಿರುವ ಆನ್‌ಲೈನ್ ಕೋರ್ಸ್‌ ಹಾಗೂ ವೆಬ್‌ನಾರ್‌ನಲ್ಲಿ ಭಾಗವಹಿಸುವ ಅವಕಾಶ

ಲೊರೆಯಾಲ್ ಇಂಡಿಯಾ ಸಂಸ್ಥೆಯ ಉನ್ನತಮಟ್ಟದ ಮ್ಯಾನೇಜ್‌ಮೆಂಟ್ ವೃತ್ತಿಪರರು ಆಯೋಜಿಸುವ ಕೌಶಲ ಅಭಿವೃದ್ಧಿ ಕುರಿತ ಆನ್‌ಲೈನ್ ವೆಬಿನಾರ್‌ಗಳಲ್ಲಿ ಭಾಗವಹಿಸುವ ಅವಕಾಶ. ವಿಶ್ವದಾದ್ಯಂತವಿರುವ ವಿಶ್ವವಿದ್ಯಾಲಯಗಳಲ್ಲಿನ ವೃತ್ತಿಪರ ಶಿಕ್ಷಣ, ಪದವಿ ಶಿಕ್ಷಣಕ್ಕೆ ಸಂಬಂಧಿಸಿದ ಐದು ಸಾವಿರ ಕೋರ್ಸ್‌ಗಳನ್ನು ಹೊಂದಿರುವ ‘ಕೋರ್ಸಿಯಾರಾ’ ಕಲಿಕಾ ವೇದಿಕೆಯಿಂದ ಎರಡು ತಿಂಗಳು ಉಚಿತವಾಗಿ ಆನ್‌ಲೈನ್‌ ಮೂಲಕ 33 ಕೋರ್ಸ್‌ಗಳನ್ನು ಕಲಿಯುವ ಅವಕಾಶ.

l ಲೊಯೆರಾಲ್‌ ಇಂಡಿಯಾ ಕಂಪನಿಯಲ್ಲಿ ತಜ್ಞ ಕೈಗಾರಿಕೋದ್ಯಮಗಳಿಂದ ‘ಒನ್‌ ಟು ಒನ್‌’ ಮೆಂಟರ್‌ಷಿಪ್‌ ಸೆಷನ್‌ಗಳಲ್ಲಿ ಭಾಗವಹಿಸುವ ಅವಕಾಶ.

l‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-11-2022

l‌ ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

l‌ ಹೆಚ್ಚಿನ ಮಾಹಿತಿಗೆ: www.b4s.in/praja/LEAD1

ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಷಿಪ್ ಆ್ಯಂಡ್ ಮೆಂಟರ್‌ಷಿಪ್ ಪ್ರೋಗ್ರಾಂ 2022-23

ಕೋಲ್ಗೆಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದಕ್ಕಾಗಿ ‘ಸ್ಕಾಲರ್‌ಷಿಪ್‌ ಆ್ಯಂಡ್ ಮೆಂಟರ್‌ಷಿಪ್‌–2022–23’ ಕಾರ್ಯಕ್ರಮವನ್ನು ರೂಪಿಸಿದೆ.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು(ವಿದ್ಯಾರ್ಥಿವೇತನ) ನೀಡುವ ಮೂಲಕ ಅವರ ಶೈಕ್ಷಣಿಕ/ವೃತ್ತಿಯನ್ನು ಮುಂದುವರಿಸಲು ಅವಕಾಶ ನೀಡುತ್ತಿದೆ.

ದುರ್ಬಲ ವರ್ಗದ ಕುಟುಂಬದವರ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಅರ್ಹತೆ:

l‌ 2022 ರ ಬೋರ್ಡ್ ಪರೀಕ್ಷೆಗಳಾದ 10 ನೇ ತರಗತಿಯಲ್ಲಿ ಕನಿಷ್ಠ ಶೇ 75 ಅಥವಾ 12 ನೇ ತರಗತಿ(ದ್ವಿತೀಯ ಪಿಯುಸಿ) ಕನಿಷ್ಠ ಶೇ 60ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

l‌ 3 ವರ್ಷದ ಪದವಿ ಮತ್ತು 4 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು (ಎಂಜಿನಿಯರಿಂಗ್/ಎಂಬಿಬಿಎಸ್/ಬಿಡಿಎಸ್ ಡೆಂಟಲ್) ಮುಂದುವರಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

l‌ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ ₹ 5 ಲಕ್ಷಗಳನ್ನು ಮೀರಬಾರದು.

ಅರ್ಹತೆ: ಆಯ್ದ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಶಿಕ್ಷಣದ ಮಟ್ಟವನ್ನು ಅವಲಂಬಿಸಿ 4ವರ್ಷಗಳವರೆಗೆ ಅಧ್ಯಯನಕ್ಕಾಗಿ ವರ್ಷಕ್ಕೆ ರೂ.50,000ದ ವರೆಗಿನ ವಿದ್ಯಾರ್ಥಿವೇತನ ಪ್ರಶಸ್ತಿಗಳನ್ನು ಪಡೆಯಬಹುದು.

l‌ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-11-2022

l‌ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

l‌ಹೆಚ್ಚಿನ ಮಾಹಿತಿಗೆ : www.b4s.in/praja/KISF6

ರತ್ತಿ ಚಾತ್ರ್ ಸ್ಕಾಲರ್‌ಷಿಪ್ 2022-23

ಇಂಡಿಯನ್ ಇನ್ಸ್‌‌‌‌‍ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಪದವಿ ಕಾರ್ಯಕ್ರಮಕ್ಕೆ (ಬಿ.ಇ. / ಬಿ.ಟೆಕ್.) ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದೊಂದಿಗೆ ಪ್ಯಾನಸೋನಿಕ್ ಕಂಪನಿ ರತ್ತಿ ಚಾತ್ರ್‌ ಸ್ಕಾಲರ್‌ಷಿಪ್‌ ಯೋಜನೆ ರೂಪಿಸಿದೆ.

ಅರ್ಹತೆ:

l‌2022-23ರಲ್ಲಿ ಐಐಟಿಗಳಲ್ಲಿ (ಇಂಡಿಯನ್ ಇನ್ಸ್‌‌‌‌‍ಟಿಟ್ಯೂಟ್ ಆಫ್ ಟೆಕ್ನಾಲಜಿ) ಬಿ.ಇ. / ಬಿ.ಟೆಕ್‌ ಕೋರ್ಸ್‌‌‌ಗಳಿಗೆ ಪ್ರವೇಶ ಪಡೆಯುವ ಭಾರತದ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು.

l‌ ಅರ್ಜಿದಾರರು ತಮ್ಮ 12 ನೇ ತರಗತಿ ಪರೀಕ್ಷೆಯನ್ನು ಶೇ 75 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

l‌ ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರು.

l‌ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷಕ್ಕಿಂತ ಹೆಚ್ಚಿರಬಾರದು.

l‌ 2022-2023 ವರ್ಷದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

l ಆರ್ಥಿಕ ನೆರವು : 4 ವರ್ಷಗಳವರೆಗೆ ಪ್ರತಿ ವರ್ಷ ₹ 42,500.

l ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-11-2022

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

l ಹೆಚ್ಚಿನ ಮಾಹಿತಿಗೆ : www.b4s.in/praja/RCSP5

ಕೃಪೆ: www.Buddy4Study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT