ವಿಜಯಪುರ: ‘ಸಮಾಜದ ಕೆಳಸ್ತರದಿಂದ ಬಂದಿರುವ ಡಾ.ಬಿ.ಆರ್. ಅಂಬೇಡ್ಕರ್ ತಮ್ಮಲ್ಲಿರುವ ಛಲ, ಬಲ ಹಾಗೂ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿದ್ದಾರೆ. ಶಿಕ್ಷಣವೇ ಶಕ್ತಿ ಎಂದು ಭಾವಿಸಿ ಅದನ್ನು ಸಾಧಿಸಿದ ಶ್ರೇಯಸ್ಸು ಅವರದು, ಅವರ ಜೀವನ ಸರ್ವ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಹೇಳಿದರು.

ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 135 ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದ ಸಂವಿಧಾನ ಶಿಲ್ಪಿಗಳಾದ ಅವರು ನಿರಂತರವಾದ ಓದುವ ಅಭ್ಯಾಸ ರೂಢಿಸಿಕೊಂಡಿದ್ದರು. ಸಮಾಜದಲ್ಲಿರುವ ವರ್ಗ, ವರ್ಣ, ಲಿಂಗ ಅಸಮಾನತೆಯನ್ನು ಹೋರಾಟದಿಂದ ವಿರೋಧಿಸಿ, ಸಮಾನತೆ ಸಾಧಿಸಲು ಪ್ರಯತ್ನ ಮಾಡಿದರು. ಅವರು ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಮಹಿಳೆಯರಿಗಾಗಿ ಅನೇಕ ಕಾನೂನುಗಳನ್ನು ರೂಪಿಸಿ ಸ್ವತಂತ್ರವಾಗಿ ಬದುಕಲು ಮಾರ್ಗ ತೋರಿದರು’ ಎಂದು ತಿಳಿಸಿದರು.

ಬುದ್ಧವಿಹಾರ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿದರು. ವಕೀಲ ನಾಗರಾಜ ಲಂಬು, ಸಿಕ್ಯಾಬ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಪುಣೇಕರ, ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ಗವರ್ನಿಂಗ್ ಕೌನ್ಸಿಲ್ ಚೇರ್ ಮನ್ ರಿಯಾಜ್ ಫಾರೂಖಿ, ಜಿಲ್ಲಾ ಸಹಕಾರಿ ಸಂಘಗಳ ನಿವೃತ್ತ ಉಪನಿಬಂಧಕ ಸಿ.ಎಸ್.ನಿಂಬಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-26-2004411500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.