ವಿಜಯಪುರ: ‘ಸಹನೆ, ಕಠಿಣ ಪರಿಶ್ರಮ, ತ್ಯಾಗ ಹಾಗೂ ಸಮರ್ಪಣಾ ಮನೋಭಾವಗಳನ್ನು ಅಳವಡಿಸಿಕೊಂಡವರು ಉತ್ತಮ ಆಡಳಿತಗಾರರಾಗಲು ಸಾಧ್ಯ’ ಎಂದು ಬಿಎಲ್ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್.ವಿ. ಕುಲಕರ್ಣಿ ಹೇಳಿದರು.

ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಚಾರ್ಯೆ ಆರ್.ಎಂ.ಮಿರ್ಧೆ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉತ್ತಮ ಆಡಳಿತಗಾರನ ಮೊದಲ ಗುಣ ಸಹನೆ. ಪ್ರೋಫೆಸರ್, ಪ್ರಿನ್ಸಿಪಲ್ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಆದರೆ, ಪ್ರಾಚಾರ್ಯ ಹುದ್ದೆ ನಿರ್ವಹಣೆ ಅಷ್ಟೊಂದು ಸುಲಭವಾದದ್ದಲ್ಲ. ನಾವು ಆಡಳಿತ ಮಾಡಿ ನಮ್ಮ ಹೆಜ್ಜೆ ಗುರುತುಗಳನ್ನು ಆ ಸಂಸ್ಥೆಯಲ್ಲಿ ಉಳಿಸಿಕೊಂಡು ಹೋಗಬೇಕಾದರೆ ಸಂಯಮ ಹಾಗೂ ವೃತ್ತಿ ಮೇಲಿನ ಶ್ರದ್ಧೆ ಬಹಳ ಮುಖ್ಯವಾಗುತ್ತವೆ’ ಎಂದರು.

ನಿವೃತ್ತ ಪ್ರಾಚಾರ್ಯೆ ಆರ್.ಎಂ.ಮಿರ್ಧೆ ಮಾತನಾಡಿ, ‘ಬಿಎಲ್ಡಿಇ ಸಂಸ್ಥೆಯಲ್ಲಿ ಸುಧೀರ್ಘ 38 ವರ್ಷಗಳ ಸಾರ್ಥಕ ವೃತ್ತಿ ಬದುಕು ಸಾಗಿಸಿದ್ದೇನೆ. ಇಂದು ವೃತ್ತಿ ಜೀವನದ ಕೊನೆಯ ದಿನ ಈ ಸಂಸ್ಥೆ ನನಗೆ ಬಹಳಷ್ಟು ಜವಾಬ್ದಾರಿಯನ್ನು ನೀಡಿತ್ತು. ಅವುಗಳನ್ನು ನಿಮ್ಮೆಲ್ಲರ ಸಹಕಾರ ಹಾಗೂ ಸಲಹೆಯ ಮೇರೆಗೆ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇನೆ’ ಎಂದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ, ಆಡಳಿತಾಧಿಕಾರಿ ಪ್ರೊ.ವಿ.ಎಸ್. ಬಗಲಿ ಮಾತನಾಡಿದರು. ಬಿಎಲ್ಡಿಇ ಸಂಸ್ಥೆಯ ದೈಹಿಕ ನಿರ್ದೇಶಕ ಎಸ್.ಎಸ್. ಕೋರಿ, ಐ.ಎಸ್. ಕಾಳಪ್ಪನವರ, ಅನೀಲ ನಾಯಕ, ಪಿ.ಎಸ್. ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-465623314

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.